www.karnatakatv.net: ಮೈಸೂರು ದಸರಾ ಮಹೋತ್ಸವದ ಸಿದ್ದತೆಗಳು ನಡೆಯುತ್ತಿದ್ದು, ಅ. 7ರಿಂದ 15 ರವರೆಗೆ ಸರಳವಾಗಿ ಆಚರಿಸಲಾಗುತ್ತಿದೆ. ಹಾಗೇ ಕೊರೊನಾ ಹಿನ್ನಲೇ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಮೈಸೂರು ಅರಮನೆಯಲ್ಲಿ ಈಗಾದ್ರು ವಿಜೃಂಭಣೆಯಿಂದ ದಸರಾವನ್ನು ನೆರವೆರಿಸಬೇಕು ಎಂದು ಅಂದುಕೊಂಡಿದ್ರೆ ಅದು ಮತ್ತೆ ಹುಸಿಯಾಗಿದೆ, ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಈ ಭಾರಿಯು ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಂದಾಗಿದೆ. ಅ.1,7,14,15,31 ರಂದು ಅರಮನೆ ವೀಕ್ಷಣೆಗೆ ಪ್ರವಾಸಿಗರು ಭೇಟಿ ನೀಡುವಂತಿಲ್ಲ ಎಂದು ಮೈಸೂರು ಅರಮನೆಯ ಮಂಡಳಿಯ ಉಪನಿರ್ದೇಶಕರು ತಿಳಿಸಿದ್ದಾರೆ.
ಅರಮನೆಯಲ್ಲಿ ಅ.1 ರಂದು ಸಿಂಹಾಸನಾ ಜೋಡಣೆ ಪ್ರಯುಕ್ತ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಪ್ರವಾಸಿಗರಿ ಪ್ರವೇಶವಿರುವುದಿಲ್ಲ ಹಾಗೇ ಅ.7 ರಂದು ಖಾಸಗಿ ದರ್ಬಾರ್ ಇರುವದರಿಂದ ರಾಜವಂಶಸ್ಥರ ಧಾರ್ಮಿಕ ಪೂಜೆಯ ಪ್ರಯುಕ್ತ ಬೆಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ತನಕ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ ಮತ್ತು ಅ.14 ರಂದು ಆಯುಧ ಪೂಜೆ ಪ್ರಯುಕ್ತ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕರ್ನಾಟಕಟ ಟಿವಿ- ಮೈಸೂರು