www.karnatakatv.net : ಬೆಂಗಳೂರು: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಂತ್ರಿ ಮಾಲ್ ಗೆ ಬೀಗ ಜಡಿಯಲಾಗಿದೆ.
ಹೌದು, ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರೋ ಮಂತ್ರಿ ಮಾಲ್ ಆಸ್ತಿ ತೆರಿಗೆ ಪಾವತಿಸದಕ್ಕಾಗಿ ಬಿಬಿಎಂಪಿ ಬೀಗ ಹಾಕಿದೆ. ಒಟ್ಟು 27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಂತ್ರಿ ಮಾಲ್ ಟ್ಯಾಕ್ಸ್ ಕಟ್ಟದೆ ಕಳ್ಳಾಟ ವಾಡ್ತಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತ ಬಿಬಿಎಂಪಿ ಸದ್ಯ ಮಾಲ್ ನಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯದಂತೆ ಬೀಗ ಹಾಕಿದೆ. ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಆದೇಶದ ಮೇರೆ ಮಾಲನ್ನು ಬಂದ್ ಮಾಡಲಾಗಿದೆ.
ಇನ್ನು ಆಸ್ತಿ ತೆರಿಗೆ ಪಾವತಿ ಮಾಡೋದಾಗಿ ಮಾಲ್ ನ ಆಡಳಿತ ಮಂಡಳಿ ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿತ್ತು. ಅನೇಕ ಬಾರಿ ಬಿಬಿಎಂಪಿ ತೆರಿಗೆ ಪಾವತಿಸಿ ಅಂತ ನೋಟೀಸ್ ನೀಡಿತ್ತು. ಆದ್ರೂ ಸಹ ತೆರಿಗೆ ಪಾವತಿ ಮಾಡದ ಮಾಲನ್ನು ಕಡೆಗೆ ಬಿಬಿಎಂಪಿ ಮುಚ್ಚಿದೆ. ಇನ್ನು ತೆರಿಗೆ ಪಾವತಿ ಮಾಡೋವರೆಗೂ ಮಾಲ್ ಓಪನ್ ಮಾಡಲಾಗೋದಿಲ್ಲ ಅಂತ ಪಾಲಿಕೆ ಆಯುಕ್ತ ತಿಳಿಸಿದ್ದಾರೆ.
ಕರ್ನಾಟಕ ಟಿವಿ- ಬೆಂಗಳೂರು