www.karnatakatv.net : ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ ಸುಲ್ತಾನ ಎಂಬ ಕೋಣ ಇನ್ನು ನೆನಪು ಮಾತ್ರ.
ಹೌದು, ಬರೋಬ್ಬರಿ 21 ಕೋಟಿ ಮೌಲ್ಯ ದ ಈ ಸುಲ್ತಾನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿತ್ತು. ಅದರ ಪೂರ್ಣ ಹೆಸರು ಸುಲ್ತಾನ್ ಜೋಟೆ, ಹೃದಯಾಘಾತದಿಂದ ಸುಲ್ತಾನ್ ಅನಿರೀಕ್ಷಿತವಾಗಿ ಮೃತ ಪಟ್ಟಿದೆ ಎಂದು ತಿಳಿಸಿದ್ದಾರೆ.
ಅಜಾನುಬಾಹು ಕೋಣ ಅಸಾಧಾರಣ ಬೆಲೆಗೆ ಹೆಸರುವಾಸಿಯಾಗುತ್ತು, 2013 ರಲ್ಲಿ ಅಖಿಲ ಭಾರತ ಎನಿಮಲ್ ಬ್ಯೂಟಿ ಸ್ಪರ್ಧೆಯಲ್ಲಿ ಹರಿಯಾಣ ಸೂಪರ್ ಬುಲ್, ಜಜ್ಜಾರ್, ಸರ್ನಾಲ್ , ಮತ್ತು ಹಿಸಾರ್ ಪ್ರಶಸ್ತಿಗಳನ್ನು ಗೆದ್ದಿದೆ.
6 ಅಡಿ ಉದ್ದ ಮತ್ತು 1 ಟನ್ ತೂಕ ಹೊಂದಿದ್ದ ಈ ಸುಲ್ತಾನ್ ಪ್ರತಿ ದಿನ 10 ಲೀಟರ್ ಹಾಲು, 20 ಕೆಜಿ ಕ್ಯಾರೆಟ್, 10 ಕೆಜಿ ಸೋಪ್ಪು ಮತ್ತು 12ಕೆಜಿ ಒಣ ಹುಲ್ಲನ್ನು ಸೇವಿಸುತ್ತಿದ್ದ ಎಂದು ಮಾಲೀಕ ನರೇಶ್ ತಿಳಿಸಿದ್ದಾರೆ. ಸಂಜೆಯ ವೇಳೆ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುವ ಮದ್ಯ ಮತ್ತು ವೈನ್ ಕುಡಿಯುವುದು ಸುಲ್ತಾನ್ ನ ವಿಶೇಷ ವಾಗಿತ್ತು.
ಸುಲ್ತಾನ್ ನ ಬೆಲೆ 21 ಕೋಟಿ ಬಂದಿದ್ದರು ಸಹ ರಾಜಸ್ಥಾನದ ಪುಸ್ಕರ್ ಪಶು ಮೇಳದಲ್ಲಿ ಮಾಲೀಕ ನರೇಶ ಮಾರಾಟ ಮಾಡಲು ಸಿದ್ಧರಿರಲಿಲ್ಲ. ಎಷ್ಟೇ ಕೋಟಿ ಬಂದರು ತನ್ನ ಸ್ವಂತ ಮಗುವಿನಹಾಗೆ ಇರುವ ಸುಲ್ತಾನ್ ಅನ್ನು ಮಾರುವುದಿಲ್ಲ ಎಂದು ನರೇಶ್ ಹೇಳಿದ್ದರು.