- Advertisement -
www.karnatakatv.net :ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಮಳೆಯ ಜೊತೆಗೆ ಗುಡುಗಿದ ಗುಡುಗು ಸಿಡಿಲು ಹುಬ್ಬಳ್ಳಿ ಜನರನ್ನು ಗದುರಿಸಿದೆ.
ಹೌದು..ವಾಣಿಜ್ಯನಗರಿ ಹುಬ್ಬಳ್ಳಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಸತತ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಮಳೆಯ ರಭಸಕ್ಕೆ ರಸ್ತೆಯ ಮೇಲೆಯೂ ನೀರು ಹರಿದಿದೆ.
ಕೆಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ಎರಡು ವಾರಗಳಿಗೂ ಹೆಚ್ಚು ದಿನಗಳಿಂದ ಮಳೆ ಬಂದಿರಲಿಲ್ಲ. ಏಕಾಏಕಿ ಸುರಿದ ಮಳೆಯಿಂದ ಕೃಷಿ ಭೂಮಿಗೆ ಅನುಕೂಲವಾಗಿದೆ. ಹುಬ್ಬಳ್ಳಿಯಲ್ಲಿ ತಂಪಾದ ವಾತಾವರಣವೂ ನಿರ್ಮಾಣವಾಗಿದೆ.
ಕರ್ನಾಟಕ ಟಿವಿ- ಹುಬ್ಬಳ್ಳಿ
- Advertisement -