www.karnatakatv.net : ಬೆಂಗಳೂರು: ಇಯರ್ ಪೋನ್ ಅಥವಾ ಬ್ಲೂಟೂತ್ ಬಳಸಿ ವಾಹನ ಚಲಾಯಿಸಿದರೆ ರಾಜ್ಯದ ರಾಜಧಾನಿಯಲ್ಲಿ ದಂಡ ಬೀಳುತ್ತದೆ.
ಹೌದು.. ಬೆಂಗಳೂರಿನಲ್ಲಿ ಇನ್ಮುಂದೆ ವಾಹನವನ್ನು ಚಲಾಯಿಸುವಾಗ ಬ್ಲೂಟೂತ್ ಅಥವಾ ಇಯರ್ ಪೋನ್ ಬಳಸಬಾರದು ಒಂದು ವೇಳೆ ಬಳಸಿದ್ದೆಆದಲ್ಲಿ 1 ಸಾವಿರ ರೂಪಾಯಿ ದಂಡ ವಿಧಿಸಲು ಸಂಚಾರ ಪೊಲೀಸರು ತೀರ್ಮಾನಿಸಿದ್ದಾರೆ.
ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸುವುದು ತುಂಬಾ ಕಾಮನ್ ಆಗಿ ಬಿಟ್ಟಿದೆ ಆದಕಾರಣ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ಗಮನಹರಿಸಿದ ಸಂಚಾರ ವಿಭಾಗದ ಜಂಟಿ ಪೊಲೀಸರು ಆಯುಕ್ತ ಬಿ. ಆರ್. ರವಿಕಾಂತೇಗೌಡ ಮೋಟಾರು ವಾಹನ ಕಾಯ್ದೆ ಸೆಕ್ಷನ್ 194 ಅಡಿ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಆದಕಾರಣ ಇನ್ಮೂಂದೆ ಯಾರಾದ್ರು ಇಯರ್ ಪೋನ್ ಅಥವಾ ಬ್ಲೂಟೂತ್ ಬಳಸಿ ವಾಹನ ಚಲಾಯಿಸಿದ್ರೆ ದಂಡವನ್ನು ವಿಧಿಸಲಾಗುತ್ತದೆ ಎಂಧು ತಿಳಿಸಿದ್ದಾರೆ
ಇಬನ್ನೂ ಸಿಗ್ನಲ್ ನಲ್ಲಿ ಮ್ಯೂಸಿಕ್ ಅಥವಾ ಗೂಗಲ್ ಮ್ಯಾಪ್ ಬಳಕೆ ಮಾಡಬೇಕಿದ್ದರೂ ಮೊಬೈಲ್ ಸ್ಟಾಂಡ್ ಕಡ್ಡಾಯವಾಗಿ ಬಳಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ಟಿವಿ – ಬೆಂಗಳೂರು




