Saturday, July 5, 2025

Latest Posts

ಅಮೆರಿಕಾದಲ್ಲಿ 7ಲಕ್ಷ ದಾಟಿದ ಸಾವಿನ ಸಂಖ್ಯೆ ಹೆಚ್ಚಳ..!

- Advertisement -

www.karnatakatv.net : ಮಹಾಮಾರಿ ಕೊರೊನಾದಿಂದ ಜನ ತತ್ತರಿಸಿ ಹೋಗಿದ್ದಾರೆ. ಅಮೆರಿಕಾದಲ್ಲಿ ಸಾವಿನ ಸಂಖ್ಯೆ 7 ಲಕ್ಷ ದಾಡಿದ್ದು, ಡೆಲ್ಟಾ ತಳಿ ಪ್ರಕರಣ ಮಾತ್ರ ಇಳಿಮುಖವಾಗಿದೆ.

ಕೊರೊನಾ ಸೋಂಕಿನಿಂದ ಸಾವಿಗಿಡಾದ ಸಂಖ್ಯೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದ ಪ್ರಮುಖರು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮುಖಂಡರಲ್ಲಿ ಬೇಸರ ಮೂಡಿಸಿದೆ. ‘ ಕೋವಿಡ್ ನಿಂದ ರೋಗಿಗಳನ್ನು ಕಳೆದುಕೊಳ್ಳುವ ಸ್ಥಿತಿ ಬರಬಾರದು’ ಎಂದು  ಯುಎಫ್ ಹೆಲ್ತ್ ಜಾಕ್ ಸೊನ್  ವಿಲೆಯ ವ್ಯವಸ್ಥಾಪಕಿ ಡೆಬಿ ಡೆಲಪಾಜ್ ಹೇಳಿದರು.

 ಈ ಸಾವಿಗೆ  ಲಸಿಕೆ ಲಭ್ಯವಿದ್ದರೂ ಹೆಚ್ಚಿನವರು ಪಡೆದುಕೊಂಡಿಲ್ಲ ಅನ್ನೋದೇ ಕಾರಣ ವಾಗಿದೆ. ಇನ್ನು 7 ಕೋಟಿಯಷ್ಟು ಅರ್ಹ ಅಮೆರಿಕನ್ನರಿಗೆ ಲಸಿಕೆ ತಲುಪಿಲ್ಲ. ಸೆ. ಆರಂಭದಲ್ಲಿ  93 ಸಾವಿರ ಪ್ರಕರಣ ದಾಖಲಾಗುತ್ತಿದ್ದರೆ, ಈಗ 75 ಸಾವಿರಕ್ಕೆ ಇಳಿದಿದೆ. ಈಗ ಸರಾಸರಿ 1,12,000 ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡೂವರೆ ವಾರಗಳ ಸ್ಥಿತಿಗೆ ಹೋಲಿಸಿದರೆ ಮೂರನೇ ಒಂದರಷ್ಟಾಗಿದೆ. ಸಾವಿನ ಸಂಖ್ಯೆಯೂ ಕಡಿಮೆ ಆಗುತ್ತಿದೆ. ವಾರದ ಹಿಂದೆ ಸರಾಸರಿ 2,000 ಸಾವು ಸಂಭವಿಸಿದ್ದರೆ, ಈಗ 1,900ಕ್ಕೆ ಇಳಿದಿದೆ.

- Advertisement -

Latest Posts

Don't Miss