ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೋಕಿನ ಕೋಟೆಕೆರೆ ಗ್ರಾಮಪಂಚಾಯತಿಯಲ್ಲಿ ಗಾಂಧಿ ಜಯಂತಿ ಹಿಂದಿನ ದಿನವೇ ಗಾಂಧೀಜಿ, ಅಂಬೇಡ್ಕರ್ ಫೋಟೋ ಇರಿಸಿ ಗ್ರಾಮಪಂಚಾಯ್ತಿ ನೌಕರ ಅಹೋರಾತ್ರಿ ಪ್ರತಿಭಟನೆ ಕೋಟೆಕೆರೆ ಗ್ರಾಮಪಂಚಾಯತಿಯಲ್ಲಿ ನಡೆದಿದೆ..
ಕಳೆದ ನಾಲ್ಕು ವರ್ಷದಿಂದ ಸಂಬಳ ಸಿಗದ ಕಾರಣ ಗ್ರಾಮಪಂಚಾಯ್ತಿ ಮುಂದೆ ಗಾಂಧಿ ಜಯಂತಿ ಹಿಂದಿನ ದಿನ ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರ ಇರಿಸಿ ಕೋಟೆಕೆರೆ ಗ್ರಾಮಪಂಚಾಯತಿಯ ನೀರುಗಂಟಿ ವಿಠಲ್ ಪ್ರತಿಭಟನೆಯಲ್ಲಿ ನಿರತರಾಗಿದಾರೆ . ನೀರುಗಂಟಿ ಹೆಚ್.ಎಸ್.ವಿಠಲ್ ಎಂಬಾತ ನಾಲ್ಕು ವರ್ಷದಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿ ಗ್ರಾಮಪಂಚಾಯ್ತಿ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.
ಗಾಂಧೀ ಜಯಂತಿ ಹಿಂದಿನ ದಿನವೇ ಗಾಂಧಿಜಿ ಅಂಭೇಡ್ಕರ್ ಫೋಟೊ ಇರಿಸಿ ಗ್ರಾಮಪಂಚಾಯತಿ ಮುಂಭಾಗ ಪ್ರತಿಭಟನೆಗೆ ಕುಳಿತಿರುವ ವಾಟರ್ ಮನ್ ವಿಠಲ್ ಇಡೀ ನನ್ನ ಬೇಡಿಕೆ ಈಡೇರುವರೆಗೆ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ತಾಲೂಕಿನ ಬೇಗೂರು ಹೋಬಳಿಯ ಕೋಟೆಕೆರೆ ಗ್ರಾಮಪಂಚಾಯ್ತಿ ಮುಂದೆ ಪ್ರತಿಭಟನೆಗೆ ಕುಳಿತಿರುವ ವಾಟರ್ ಮನ್ ವಿಠಲ್ ನಾಲ್ಕು ವರ್ಷದಿಂದ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ವಿಠಲ್ 2014 ರಿಂದ ಕೋಟೆಕೆರೆ ಗ್ರಾಮಪಂಚಾಯ್ತಿಯಲ್ಲಿ ವಾಟರ್ ಮನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ನಾಲ್ಕು ವರ್ಷದಿಂದ ಸಂಬಳ ಇಲ್ಲದೆ ಆರ್ಥಿಕವಾಗಿ ಜರ್ಜರಿತನಾಗಿರುವ ವಿಠಲ್ ಕಳೆದ ಜೂನ್ ತಿಂಗಳಿನಲ್ಲೂ ಗ್ರಾಮಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದ್ದರು. ಅಂದು ಗುಂಡ್ಲುಪೇಟೆ ತಾಲೂಕು ಪಂಚಾಯ್ತಿ ಇ.ಓ. ಶ್ರೀಕಂಠರಾಜೇ ಅರಸ್ ಸ್ಥಳಕ್ಕೆ ಆಗಮಿಸಿ ಸಂಬಳ ಮಾಡಿಕೊಡುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿಕೊಂಡ ಮನವಿ ಮೇರೆಗೆ ಅಂದು ವಾಟರ್ ಮನ್ ವಿಠಲ್ ಪ್ರತಿಭಟನೆ ಕೈ ಬಿಟ್ಟಿದ್ರು, ಅಲ್ಲದೆ ಸಂಬಳ ನೀಡದಿದ್ರು ಕೂಡ ಹೊಣಕನಪುರ ಗ್ರಾಮಕ್ಕೆ ನೀರು ಬಿಡುವ ಕಾಯಕ ಬಿಟ್ಟಿರಲಿಲ್ಲ. ಆದರೆ ಸಂಬಳ ಸಿಗದ ಕಾರಣ ವಿಧಿ ಇಲ್ಲದೆ ಗ್ರಾಮ ಪಂಚಾಯ್ತಿ ಮುಂದೆ ಗಾಂಧಿ ಜಯಂತಿ ಹಿಂದಿನ ದಿನವೇ ಗಾಂಧಿಜೀ ಮತ್ತು ಬಾಬಾ ಸಾಹೇಬ್ ಅಂಭೇಡ್ಕರ್ ಫೋಟೊ ಹಿಡಿದು ಪ್ರತಿಭಟನೆ ಹಾದಿ ಹಿಡಿದು ಸಂಬಳ ಸಿಗೋವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವುದಲ್ಲದೆ ಗ್ರಾಮಪಂಚಾಯತಿಯಲ್ಲಿ ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಸಾದ್ , ಕರ್ನಾಟಕ ಟಿವಿ – ಚಾಮರಾಜನಗರ