1. ಇಂಗ್ಲೆಂಡ್‌ನಿಂದ ಭಾರತಕ್ಕೆ ಆಗಮಿಸುವವರಿಗೆ 10 ದಿನ ಕ್ವಾರಂಟೈನ್..!
ಇಂಗ್ಲೆಂಡ್‌ನಿಂದ ಭಾರತಕ್ಕೆ ಆಗಮಿಸುವವರಿಗೆ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಕೊವಿಡ್ ಹಿನ್ನೆಲೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಅಕ್ಟೋಬರ್ 4ರಿಂದ ಅನ್ವಯವಾಗುವಂತೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಇಂಗ್ಲೆಂಡ್ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದವರಿಗೆ ತನ್ನ ದೇಶಕ್ಕೆ ಎಂಟ್ರಿ ಇಲ್ಲ ಅಂತ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರಜೆಗಳಿಗೆ ಕೂಡ ಕ್ವಾರಂಟೈನ್ ಕಡ್ಡಾಯಗೊಳಿಸಿ ಇಂಗ್ಲೆಂಡ್‌ಗೆ ಭಾರತ ತಿರುಗೇಟು ನೀಡಿದೆ.
2. ಚೀನಾ ತೈವಾರ ಕ್ಯಾತೆ..!
ತೈವಾನ್ ತನ್ನದೇ ಪ್ರದೇಶ ಅಂತ ಪ್ರತಿಪಾದಿಸುತ್ತಲೇ ಬಂದಿರೋ ಚೀನಾ ಈಗ ತೈವಾನ ಜೊತೆ ಕ್ಯಾತೆ ತೆಗೆದಿದೆ. ಚೀನಾದ ಸುಮಾರು 38 ಚೈನೀಸ್ ಮಿಲಿಟರಿ ವಿಮಾನಗಳು ತೈವಾನ್ನತ್ತ ರಕ್ಷಣಾ ವಲಯಗಳಿಗೆ ಪ್ರವೇಶ ಮಾಡಿವೆ . ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನಿನ್ನೆ 25 ಯುದ್ಧ ವಿಮಾನಗಳ ಮತ್ತು 13 ಜೆಟ್ ಗಳನ್ನು ತೈವಾನ್ನತ್ತ ಕಳಿಸಿತು. ಚೀನಾದ ಈ ಪ್ಲೇನ್ಗಳಲ್ಲಿ ಎರಡು ಬಾಂಬರ್ಗಳೂ ಇದ್ದವು ಎಂದು ತೈವಾನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
3.ಭಾರತದ ಕೊವಿಶೀಲ್ಡ್ ಲಸಿಕೆಗೆ ಆಸ್ಟ್ರೇಲಿಯಾ ಮಾನ್ಯತೆ..!
ಭಾರತದ ಕೊವಿಶೀಲ್ಡ್ ಕೊರೊನಾ ಲಸಿಕೆಗೆ ಆಸ್ಟ್ರೇಲಿಯಾ ಮಾನ್ಯತೆ ನೀಡಿದೆ. ಆಸ್ಟ್ರೇಲಿಯಾಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಸೂಕ್ತ ಕೊರೊನಾ ಲಸಿಕೆ ಪಡೆದಿರಬೇಕು ಅಂತ ತಿಳಿಸಿದೆ. ಆಸ್ಟ್ರೇಲಿಯಾ ಈಗಾಗಲೇ ಫಿಜರ್, ಆಸ್ಟ್ರಾಜೆನೆಕಾ, ಮಾಡರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಲಸಿಕೆಗಳನ್ನು ಮಾನ್ಯ ಮಾಡಿತ್ತು. ಇದೀಗ ಕೊವಿಶೀಲ್ಡ್, ಕೊರೊನಾವ್ಯಾಕ್ಸಿನ್ ಗಳು ಆ ಸಾಲಿಗೆ ಸೇರಿದಂತಾಗಿವೆ.
4. ಜಲಜೀವನ್ ಮಿಷನ್‌ನಿಂದ 5 ಕೋಟಿ ಮನೆಗಳಿಗೆ ನೀರು ಸರಬರಾಜು..!
ದೇಶದಲ್ಲಿ ಜಲಜೀವನ್ ಮಿಷನ್‌ನಿಂದ 5 ಕೋಟಿ ಮನೆಗಳಿಗೆ ನೀರು ಸರಬರಾಜು ಮಾಡಲಾಗುವುದು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವಾತಂತ್ರ್ಯದ ಬಳಿಕ 2019ರವರೆಗೆ ದೇಶದಲ್ಲಿ 3 ಕೋಟಿ ಕುಟುಂಬಗಳಿಗಷ್ಟೇ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಈಗ 80 ಜಿಲ್ಲೆಗಳಲ್ಲಿ 5 ಕೋಟಿ ಕುಟುಂಬಗಳಿಗೆ ಸಂಪರ್ಕ ಒದಗಿಸಲಾಗಿದೆ. ಜಲ ಜೀವನ ಮಿಷನ್ ದೇಶದ ಮಹಿಳೆಯರ ಸಮಯ ಉಳಿಸುವ ಮೂಲಕ ಅವರ ಸಬಲೀಕರಣಕ್ಕೆ ಸಹಾಯಕಾರಿಯಾಗಲಿದೆ ಅಂತ ಮೋದಿ ಹೇಳಿದ್ದಾರೆ.
5. ರಾತ್ರಿಯಿಡೀ ಸಿಎಂ ನಿವಾಸದ ಎದುರಿನಲ್ಲೇ ಜಾಗರಣೆ ಮಾಡುವುದಾಗಿ ಎಚ್ಚರಿಕೆ..!
ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಾವಿರಾರು ರೈತರು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ನಿವಾಸದ ಎದುರಿಗೆ ನಡೆಸಿದ್ರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿರೋ ಪ್ರತಿಭಟನಾಕಾರರು ರಾತ್ರಿಯಿಡೀ ಸಿಎಂ ನಿವಾಸದ ಎದುರಿನಲ್ಲೇ ಜಾಗರಣೆ ಮಾಡುವ ಎಚ್ಚರಿಕೆ ನೀಡಿದ್ರು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ರೈತರ ನಿಯಂತ್ರಿಸೋ ಸಲುವಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ ಪ್ರಯೋಗಿಸಿದರು.
6. ನಾನು ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ; ಕನ್ನಯ್ಯ
ತಮ್ಮನ್ನು ತುಕ್ಡೇ ಗ್ಯಾಂಗ್ ಅಂತ ಕರೆದಿದ್ದ ಬಿಜೆಪಿಯನ್ನು ತುಕ್ಡೇ ತುಕ್ಡೇ ಮಾಡೋದಾಗಿ ಕನ್ಹಯ್ಯ ಕುಮಾರ್ ಹೇಳಿದ್ದಾರೆ. ಬಿಜೆಪಿ ನನ್ನನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ ಅಂತ ಕರೆಯುತ್ತದೆ. ನಾನು ಬಿಜೆಪಿ ಪಾಲಿಗೆ ತುಕ್ಡೆ ತುಕ್ಡೆ. ನಾನು ಬಿಜೆಪಿಯನ್ನು ತುಕ್ಡೆ ತುಕ್ಡೆ ಮಾಡುತ್ತೇನೆ. ಈ ಪಕ್ಷವು ಗೋಡ್ಸೆಯನ್ನು ರಾಷ್ಟ್ರಪಿತ ಅಂತ ಪರಿಗಣಿಸಿದೆಯೇ ಹೊರತು ಗಾಂಧಿಯನ್ನಲ್ಲ. ಅವರು ಅಮೆರಿಕ ಅಧ್ಯಕ್ಷರ ಮುಂದೆ ಮಾತ್ರವೇ ಗಾಂಧಿಯನ್ನು ಹೊಗಳುತ್ತಾರೆ” ಎಂದು ಕನ್ನಯ್ಯ ಕುಮಾರ್ ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಹೇಳಿದ್ದಾರೆ.
7. ಕರ್ನಾಟಕದಲ್ಲೂ ದಲಿತ ಸಿಎಂ ಬೇಕೆಂದು ಒತ್ತಾಯ ಕೇಳಿಬರಬಹುದು; ಡಾ.ಜಿ.ಪರಮೇಶ್ವರ್
ಪಂಜಾಬ್ ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿರೋರೀತಿ ಕರ್ನಾಟಕದಲ್ಲೂ ದಲಿತ ಸಿಎಂ ಬೇಕೆಂದು ಒತ್ತಾಯ ಕೇಳಿಬರಬಹುದು ಅಂತ ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ದಲಿತರನ್ನು ಸಿಎಂ ಮಾಡಬೇಕು ಅಂತ ಕೇಳುವಂತಾಗಬಹುದು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಕಳೆದ ಬಾರಿಯೂ 3 ಜನ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಈ ಬಾರಿಯೂ ಮೂವರು ಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ ಅಂತ ಪರಮೇಶ್ವರ್ ಹೇಳಿದ್ದಾರೆ.
8. ಬಿಎಂಟಿಸಿ ಹೆಚ್ಚುವರಿ ಬಸ್ ಸಂಚಾರಕ್ಕೆ ನಿರ್ಧಾರ..!
ರಾಜ್ಯದ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅ.4ರಿಂದ ದಿನಪೂರ್ತಿ ಭೌತಿಕ ತರಗತಿಗಳನ್ನು ನಡೆಸಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಬಿಎಂಟಿಸಿ ಹೆಚ್ಚುವರಿ ಬಸ್ ಸಂಚಾರಕ್ಕೆ ನಿರ್ಧರಿಸಿದೆ. ಹೀಗಾಗಿ ಅಕ್ಟೋಬರ್ 4ರಿಂದ ಹೆಚ್ಚುವರಿಯಾಗಿ 100 ಬಸ್ ಗಳನ್ನು ಸಂಚಾರಕ್ಕೆ ಒದಗಿಸಲಿದೆ. ಸಾರ್ವಜನಿಕರ ಸುರಕ್ಷಿತ ಮತ್ತು ಸಮರ್ಪಕ ಸಂಚಾರಕ್ಕೆ ಬಿಎಂಟಿಸಿ ಈ ನಿರ್ಧಾರ ಕೈಗೊಂಡಿದೆ.
9. ರಶ್ಮಿಕಾ, ವಿಜಯ್ ಗೋವಾ ವೆಕೇಶನ್..!
ಸದ್ಯ ಶೂಟಿಂಗ್ ನಿಂದ ಬ್ರೇಕ್ ಪಡೆದಿರೋ ರಶ್ಮಿಕಾ ಮಂದಣ್ಣ, ಗೋವಾ ವೆಕೇಶನ್ ನಲ್ಲಿದ್ದಾರೆ. ರಶ್ಮಿಕಾ ಜೊತೆ ನಟ ವಿಜಯ್ ದೇವರಕೊಂಡ ಕೂಡ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಸದ್ಯ ಗೋವಾದಲ್ಲಿ ಲೈಗರ್ ಚಿತ್ರದ ಶೂಟಿಂಗ್ ಮುಗಿಸಿರೋ ದೇವರಕೊಂಡ ಸದ್ಯ ರಶ್ಮಿಕಾ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಬ್ಯುಟಿಫುಲ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇನ್ನು ದೇವರಕೊಂಡ ಮತ್ತು ರಷ್ಮಿಕಾ ಬಗ್ಗೆ ಈಗಾಗಲೇ ಎದ್ದಿರೋ ಗಾಸಿಪ್ ಗೆ ಸದ್ಯ ಈ ಗೋವಾ ಟ್ರಿಪ್ ಮತ್ತಷ್ಟು ಪುಷ್ಟಿ ನೀಡಿದೆ.
10. 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದಿನ ಐಪಿಎಲ್ 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ನಡೆಸಲಿವೆ. ಈ ಮ್ಯಾಚ್ ನಲ್ಲಿ ಒಂದು ವೇಳೆ ರಾಜಸ್ತಾನ ರಾಯಲ್ಸ್ ಸೋತರೆ ಟೂರ್ನಿಯಿಂದಲೇ ಹೊರಬರಲಿದೆ. ಈಗಾಗಲೇ ಪ್ಲೇ ಆಫ್ ತಲುಪಿರೋ ಚೆನ್ನೈ ತಂಡ ರಾಜಸ್ಥಾನಕ್ಕೆ ಶಾಕ್ ಕೊಡಲು ರೆಡಿಯಾಗಿದೆ. ಐಪಿಎಲ್ ರ್ಯಾಂಕಿಂಗ್ ನಲ್ಲಿ ಚೆನ್ನೈ ಮೊದಲ ಸ್ಥಾನದಲ್ಲಿದ್ರೆ ರಾಜಸ್ಥಾನ 7ನೇ ಸ್ಥಾನದಲ್ಲಿದೆ.