www.karnatakatv.net : ಬಾರಿ ಮಳೆಯಿಂದ ರೈತರು ಬೆಳೆದ ತರಕಾರಿಗಳು ನಾಶವಾಗುತ್ತಿದೆ ಹಾಗೇ ಹೊರ ರಾಜ್ಯದಿಂದ ಬರುತ್ತಿದ ಟೊಮೆಟೊ ಕೂಡಾ ಈಗ ಬರದ ಕಾರಣ ದರ ಮತ್ತೆ ಏರಿಕೆಯಾಗಿದೆ.
ಹೌದು..ದೈನಂದಿನ ವಸ್ತುಗಳ ಮೇಲಿನ ದರ ಹೆಚ್ಚಳವಾಗುತ್ತಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಟೊಮೆಟೊ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. 1ಕೆಜಿ ಟೊಮೆಟೊ ದರ 60 ರಿಂದ 70 ರೂವರೆಗೂ ಇತ್ತು ಆದರೆ ಇಂದು ಮತ್ತೆ ದರ ಹೆಚ್ಚಳವಾಗಿದೆ. ಇಂದು 70 ರಿಂದ 80 ರೂಗಳ ವರೆಗೆ ಆಗಿದೆ. ಹಾಗೇ ಪ್ರತಿ ತರಕಾರಿಯ ಮೇಲು 10 ರಿಂದ 20 ರೂ ಗಳ ವರೆಗೂ ಏರಿಕೆಯಾಗಿದೆ. ಮಳೆ ಹೀಗೆ ಮುಂದುವರೆದರೆ ಗ್ರಾಹಕರಿಗೆ ಮತ್ತಷ್ಟು ತೊಂದರೆಯಾಗುತ್ತದೆ.




