Tuesday, December 24, 2024

Latest Posts

ಸಿಎಂ ಬ್ಯಾನರ್ಜಿ ಕಚೇರಿಯಲ್ಲಿ ಬೆಂಕಿ..!

- Advertisement -

www.karnatakatv.net: ಕೋಲ್ಕತ್ತಾ : ಸಿಎಂ ಮಮತಾ ಬ್ಯಾನರ್ಜಿ ಕಚೇರಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕೋಲ್ಕತ್ತಾದಲ್ಲಿರುವ ನಬನ್ನಾ ಕಟ್ಟಡದ 14ನೇ ಮಹಡಿಯಲ್ಲಿ ಬ್ಯಾನರ್ಜಿ ಅವರ ಕಚೇರಿ ಇದ್ದು, ಬೆಳಿಗ್ಗೆ 11:45 ಗಂಟೆಗೆ ಹೊಗೆ ಬರುತ್ತಿರುವುದನ್ನು ಕೆಲಸಗಾರರು ನೋಡಿ ಕೂಡಲೆ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಕಟ್ಟಡದ ಮೇಲಿನ ವೊಡಾಫೋನ್ ಸಿಗ್ನಲ್ ಟವರ್‌ನ ಎಲೆಕ್ಟ್ರಿಕ್ ಪ್ಯಾನಲ್‌ನಿಂದ ಈ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು.

ಅದೃಷ್ಟವಶಾತ್ ಪ್ರಸ್ತುತ ದುರ್ಗಾ ಪೂಜೆಯ ರಜೆ ಇರುವುದರಿಂದ ಸಿಎಂ ಕಚೇರಿಯನ್ನು ತೆರೆದಿರಲಿಲ್ಲ ಹಿಗಾಗಿ ಯಾವುದೇ ಅಪಾಯವಾಗಿಲ್ಲ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ವೊಡಾಫೋನ್‌ಗೆ ಸಂಬಂಧಿಸಿದ ವಿಭಾಗದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದರಿಂದ ಈ ದೂರ ಸಂಪರ್ಕ ಕಂಪೆನಿಯ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಿಗ್ನಲ್ ಟವರ್‌ಗೆ ಪಿಡಬ್ಲ್ಯೂಡಿ ವಿದ್ಯುತ್ ಸಂಪರ್ಕ ಕಲ್ಪಿಸುವುದರಿಂದ ಪಿಡಬ್ಲ್ಯೂಡಿಯ ಸಿವಿಲ್ ಮತ್ತು ವಿದ್ಯುತ್ ಘಟಕದ ಅಧಿಕಾರಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

- Advertisement -

Latest Posts

Don't Miss