Tuesday, July 22, 2025

Latest Posts

ವಾರದಲ್ಲಿ 1 ದಿನ ತಮ್ಮ ವಾಹನವನ್ನು ಓಡಿಸಬಾರದು..!

- Advertisement -

www.karnatakatv.net : ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಜನರು ಬೇಸತ್ತು ಹೋಗಿದ್ದಾರೆ. ಆದಕಾರಣ ಅರವಿಂದ ಕೇಜ್ರಿವಾಲ್ ಎಲ್ಲಾ ವಾಹನ ಚಾಲಕರಿಗೆ ತಮ್ಮ ವಾಹನಗಳನ್ನು ವಾರದಲ್ಲಿ ಒಂದು ದಿನ ಹೊರಗೆ ತೆಗೆಯಲೇ ಬೇಡಿ. ಅದನ್ನು ಹಾಗೆಯೇ ಮನೆಯಲ್ಲಿಯೇ ಇಡಬೇಕು ಮತ್ತು ಆ ದಿನ ನೀವು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಬೇಕು ಎಂದು ಮನವಿ ಮಾಡಿದ್ದಾರೆ.

ಹೌದು.. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಚಳಿಗಾಲದಲ್ಲಿ ಅಂತು ಅದು ತುಂಬಾಯಿರುತ್ತದೆ. ಅದನ್ನು ಹತೋಟಿಗೆ ತರಬೇಕೆಂದು ಕೆಲವು ವಾರಗಳ ಹಿಂದೆ ವಾಹನದ ಮಾಲಿನ್ಯ ತಪಾಸಣೆ ಮಾಡಿಸಿ ಪ್ರಮಾಣ ಪತ್ರವನ್ನು ಪೊಲೀಸರು ಕೇಳಿದಾಗ ತೋರಿಸದೆ ಹೋದರೆ ದಂಡ ವಿಧಿಸಲಾಗುವುದು ಎಂದು ದೆಹಲಿ ಸರ್ಕಾರವು ವಾಹನ ಸವಾರರಿಗೆ ಎಚ್ಚರಿಸಿತ್ತು.

ವಾಯುಮಾಲಿನ್ಯಕ್ಕೆ ಕಾರಣವೆಂದರೆ ವಾಹನಗಳು ಸೂಸುವ ಹೊಗೆ ಅದಕ್ಕೆ ಜನರು ಒಂದು ದಿನವಾದರು ತಮ್ಮ ವಾಹನವನ್ನು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಓಡಾಡಬೇಕು ಎಂದು ತಿಳಿಸಿದ್ದಾರೆ. ಅಕ್ಟೋಬರ್ ೧೮ ರಿಂದ ‘ರೆಡ್ ಲೈಟ್ ಆನ್, ಗಾಡಿ ಆಫ್’ ಎಂಬ ಹೆಸರಿನಡಿಯಲ್ಲಿ ಯೋಜನೆಯೊಂದು ರೂಪಿಸಿದ್ದು, ವಾಹನ ಚಾಲಕರು ತಮ್ಮ ವಾಹನಗಳನ್ನು ವಾರಕ್ಕೊಮ್ಮೆಯಾದರೂ ನಿಲ್ಲಿಸಲು ನಿರ್ಧರಿಸಬೇಕು ಎಂದು ಕೇಜ್ರಿವಾಲ್ ಹೇಳಿದರು. “ನಾವು ವಾರಕ್ಕೊಮ್ಮೆಯಾದರೂ ನಮ್ಮ ವಾಹನ ಹೊರತೆಗೆಯದೆ ಮೆಟ್ರೋ, ಬಸ್ ಅಥವಾ ಇತರರೊಂದಿಗೆ ವಾಹನ ಹಂಚಿಕೊAಡು ಪ್ರಯಾಣ ಬೆಳೆಸಲು ದೃಢವಾಗಿ ನಿರ್ಧರಿಸಬೇಕು. ನಾವು ಇದನ್ನು ಮಾಡಿದರೆ, ಮಾಲಿನ್ಯವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು ಮತ್ತು ಇಂಧನವನ್ನೂ ಉಳಿಸಬಹುದು ಎಂದು ತಜ್ಞರು ಹೇಳುತ್ತಾರೆ” ಎಂದು ಅವರು ಹೇಳಿದರು.ಇಷ್ಟೇ ಅಲ್ಲದೆ ದೆಹಲಿಯ ಮುಖ್ಯಮಂತ್ರಿ ‘ಗ್ರೀನ್ ದೆಹಲಿ’ ಮೊಬೈಲ್ ಅಪ್ಲಿಕೇಶನ್ ಅನ್ನು ಎಲ್ಲರೂ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ದೆಹಲಿಯ ಯಾವುದೇ ಭಾಗದಲ್ಲಿ ಯಾರಾದರೂ ಈ ವಾಯು ಮಾಲಿನ್ಯ ಹೆಚ್ಚು ಮಾಡುವ ಕೃತ್ಯಕ್ಕೆ ಕೈ ಹಾಕಿದರೆ ಆ ಘಟನೆಗಳನ್ನು ನೀವು ವರದಿ ಮಾಡಲು ಅದನ್ನು ಬಳಸಬೇಕು ಎಂದು ಹೇಳಿದರು.

- Advertisement -

Latest Posts

Don't Miss