ದಾಂಡಿಯಾಗೆ ಹೆಜ್ಜೆಹಾಕಿದ ಶಾಸಕ..!

www.karnatakatv.net: ರಾಯಚೂರು: ನವರಾತ್ರಿ ಅಂಗವಾಗಿ ರಾಜ್ಯಾದ್ಯಂತ ಶಕ್ತಿ ದೇವತೆಗಳ ಆರಾಧನೆ ನಡೆಯುತ್ತಿದ್ದು, ದಾಂಡಿಯಾ ನೃತ್ಯಕ್ಕೆ ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ.

ರಾಯಚೂರಿನಲ್ಲಿ ಅಂಬಾ ಭವಾನಿ ಪೂಜೆನಡೆಯುತ್ತಿದ್ದು, ಶಾಸಕ ಡಾ ಶಿವರಾಜ್ ಪಾಟೀಲ್, ದಾಂಡಿಯಾ ನೃತ್ಯಕ್ಕೆ ಹೆಜ್ಜೆಹಾಕಿದ್ದಾರೆ. ರಾಯಚೂರು ನಗರದ ಸ್ಟೇಷನ್ ಏರಿಯಾದ ಮುತ್ತ್ಯಾಲಮ್ಮ ದೇವಸ್ಥಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ರು. ಬಳಿಕ ಭಕ್ತರೊಂದಿಗೆ ಶಾಸಕ ಶಿವರಾಜ್ ಪಾಟೀಲ್ ದಾಂಡಿಯಾ ನೃತ್ಯಕ್ಕೆ ಸಖತ್ ಸ್ಟೆಪ್ಸ್ ಹಾಕಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಯುವತಿಯರೊಂದಿಗೆ ಕೋಲಾಟ ಆಡಿದ್ರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

About The Author