ವಾದ್ಯಮೇಳದೊಂದಿಗೆ ಹೆಜ್ಜೆ ಹಾಕಿದ ರಾಯಚೂರು ಎಸ್ ಪಿ..!

www.karnatakatv.net: ರಾಯಚೂರು: ಜಿಲ್ಲೆಯ ಡಿ ಆರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಆಯುಧ ಪೂಜೆಯನ್ನು ಎಸ್ ಪಿ ಪ್ರಕಾಶ ನಿಕ್ಕಂ ನೆರವೆರಿಸಿದ್ರು.

ದಸರಾ ನಾಡ ಹಬ್ಬವಾಗಿದ್ದು, ಎಲ್ಲೇಡೆ ಸಂಭ್ರಮ ಸಡಗರ ಮನೆ ಮಾಡಿದೆ. ಎಲ್ಲಿ ನೋಡಿದರಲ್ಲಿ ದೀಪಗಳ ಅಲಂಕಾರ ಎಲ್ಲರಲ್ಲೂ ಸಂತೋಷ, ದುಷ್ಟ ಶಕ್ತಿಗಳ ಸಂಹಾರ, ಶಿಷ್ಟರ ವಿಜಯೋತ್ಸವದ ಈ ದಿನ ವಿಜಯದಶಮಿ. ಇಂದು ಆಯುಧ ಪೂಜೆಯನ್ನು ಜಿಲ್ಲೆಯಾದ್ಯಂತ ನೆರವೇರಿಸಲಾಯಿತು. ಹಾಗೇ ರಾಯಚೂರಿನ ಪೊಲೀಸ್ ಇಲಾಖೆಯಿಂದ ಆಯುಧ ಪೂಜೆಯನ್ನ ವಿಜೃಂಭಣೆಯಿoದ ನೆರವೆರಿಸಿದ್ರು.

ಎಸ್ ಪಿ ಪ್ರಕಾಶ ನಿಕ್ಕಂ ತಮ್ಮ ಪತ್ನಿಯೊಂದಿಗೆ ಸಶಸ್ತ್ರಗಳಿಗೆ ಪೂಜೆ ಮಾಡಿ, ನಂತರ ವಾದ್ಯಮೇಳದಲ್ಲಿ ಪೊಲೀಸರೊಂದಿಗೆ ನೃತ್ಯ ಮಾಡಿ ರಂಜಿಸಿದರು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ತಾಯಿ ಚಾಮುಂಡಿಯಲ್ಲಿ ಪ್ರಾರ್ಥಿಸಿ, ನಾಡಿನ ಜನತೆಗೆ ವಿಜಯದಶಮಿಯ ಶುಭಾಶಯ ಕೋರಿದರು.

ಅನಿಲ್ ಕುಮಾರ್, ಕರ್ನಾಟಕ ಟಿವಿ – ರಾಯಚೂರು

About The Author