www.karnatakatv.net : ತಮಿಳುನಾಡಿನಲ್ಲಿ ಮತ್ತೆ ಶಾಲೆಗಳು ಪುನರಾರಂಭಿಸುವoತೆ ಆದೇಶವನ್ನು ಹೊರಡಿಸಿದೆ.
ಕೊರೊನಾ ಹಿನ್ನಲೇ ದೇಶದಲ್ಲೇಡೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು ಈಗ ಕ್ರಮೆಣ ಕೊರೊನಾ ಸೋಂಕು ಕಡಿಮೆ ಯಾಗುತ್ತಲೇ ಇದೇ, ಹಬ್ಬಗಳ ಹಿನ್ನೆಲೆಯಲ್ಲಿ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಕೋವಿಡ್ 19 ನಿರ್ಬಂಧಗಳನ್ನು ಸಡಿಲಿಕೆ ಮಾಡಿದೆ ಅದರ ಜೊತೆಗೆ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವoತೆ ಆದೇಶ ಹೊರಡಿಸಿದೆ. ತಜ್ಞರ ಸಮಿತಿಯ ಜತೆ ಸಭೆ ನಡೆಸಿದ ನಂತರ ರಾಜ್ಯದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ತಮಿಳುನಾಡು ಸರ್ಕಾರ ಈ ಮೊದಲು ಆದೇಶ ಹೊರಡಿಸಿತ್ತು. ಇದೀಗ ವಾರದ ಎಲ್ಲಾ ದಿನಗಳಲ್ಲೂ ದೇವಾಲಯ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದೆ.
ನ. 1ರಿಂದ ಪ್ಲೇ ಸ್ಕೂಲ್, ನರ್ಸರಿ ಸೇರಿದಂತೆ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿರುವುದಾಗಿ ವರದಿ ಹೇಳಿದೆ. ಶಾಲೆಯ ಸಿಬಂದಿಗಳು, ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿರಬೇಕು ಎಂದು ಸೂಚಿಸಲಾಗಿದೆ. 1ನೇ ತರಗತಿಯಿಂದ 8ನೇ ತರಗತಿವರೆಗೆ ಪುನರಾರಂಭವಾಗಲಿದ್ದು ಎಲ್ಲಾ ಅಂಗಡಿ, ಹೋಟೇಲ್ ಹಾಗೂ ಇತರ ಸೇವೆಗಳು ರಾತ್ರಿ 11ಗಂಟೆವರೆಗೆ ಕಾರ್ಯನಿರ್ವಹಿಸಲು ಅನುವು ನೀಡಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.