www.karnatakatv.net: “ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗಳಲ್ಲಿ ಸರ್ಕಾರ ನೇಮಿಸಿರುವ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಾರೆ,” ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರುಗಳನ್ನಾಗಿ ನೇಮಿಸಿದೆ, ಈ ಸಿಂಡಿಕೇಟ್ ಸದಸ್ಯರುಗಳು ಕೆಲಸ ಮಾಡಿಕೊಡಲು ಲಕ್ಷ ಲಕ್ಷ ಹಣ ಕೇಳುತ್ತಿದ್ದಾರೆ, ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆ ಹೇಳುತ್ತಿದ್ದಾರೆ. ಹಾಗೇ 40 ವರ್ಷದ ಹಿಂದಿನ ಆರ್‌ಎಸ್‌ಎಸ್ ಬೇರೆ, ಇವತ್ತಿನ ಆರ್‌ಎಸ್‌ಎಸ್ ಬೇರೆ. ವಿಜಯದಶಮಿಯ ದಿನದಂದು ಆರ್‌ಎಸ್‌ಎಸ್‌ನ ಮೋಹನ್ ಭಾಗವತ್ ಒಂದು ಹೇಳಿಕೆ ನೀಡಿದ್ದಾರೆ. ಎಲ್ಲ ಹಿಂದೂ ದೇವಸ್ಥಾನಗಳನ್ನು ಆರ್‌ಎಸ್‌ಎಸ್ ಸುಪರ್ದಿಗೆ ನೀಡಿ ಎಂದು. ಹಿಂದೂ ದೇವಾಲಯಗಳನ್ನು ಆರ್‌ಎಸ್‌ಎಸ್ನವರು ಗುತ್ತಿಗೆ ಹಾಕಿಕೊಂಡಿದ್ದಾರಾ,” ಎಂದು ಪ್ರಶ್ನಿಸಿದರು.
“ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ತಮಗೆ ಆದಂತಹ ಅನುಭವದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಿಎಂ ಇಬ್ರಾಹಿಂರನ್ನು ಕಾಂಗ್ರೆಸ್ ಪಕ್ಷ ಕೇವಲ ಭಾಷಣಕ್ಕಾಗಿ ಇರಿಸಿಕೊಂಡಿದೆ. ಭಾಷಣದ ಮೂಲಕ ಜನರನ್ನು ಆಕರ್ಷಣೆಯನ್ನು ಮಾಡುವುದಕ್ಕೆ ಕಾಂಗ್ರೆಸ್ ನಾಯಕರು ಇಬ್ರಾಹಿಂರನ್ನು ಇಟ್ಟುಕೊಂಡಿದ್ದಾರೆ,” ಎಂದು ಮಾಜಿ ಸಿಎಂ ಎಚ್‌ಡಿಕೆ ವ್ಯಂಗ್ಯವಾಡಿರು.
“ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಕಾಂಗ್ರೆಸ್ ತೊರೆದು ಬಂದ ಸಿ.ಎಂ. ಇಬ್ರಾಹಿಂರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ದೇವೆಗೌಡರು ಪ್ರಧಾನಿಯಾದಾಗ ಸಿ.ಎಂ. ಇಬ್ರಾಹಿಂರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಎರಡು ಖಾತೆಗಳನ್ನು ನೀಡಲಾಗಿತ್ತು. ನಾವು ಯಾವತ್ತೂ ಅಲ್ಪಸಂಖ್ಯಾತರಿಗೆ ದ್ರೋಹ ಬಗೆದಿಲ್ಲ, ನಾನು ಪದ ಬಳಕೆಯಲ್ಲಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಮಾತನಾಡಿಲ್ಲ. ರಾಜಕೀಯದ ನರಮೇಧ ಅಂತ ಹೇಳಿದ್ದೇನೆ ಹೊರತು ಸಿದ್ದರಾಮಯ್ಯನವರ ನರಮೇಧ ಅಂತ ಹೇಳಿಲ್ಲ. ಅಲ್ಪಸಂಖ್ಯಾತ ನಾಯಕರ ನರಮೇಧ ಹೇಗೆ ನಡೆಯಿತು ಅಂತ ಹೇಳಿದ್ದೇನೆ. ನಾನು ಯಾರ ಬಗ್ಗೆಯೂ ಲಘುವಾಗಿ ಪದ ಬಳಕೆಗಳನ್ನು ಮಾಡಿಲ್ಲ,” ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.



