Sunday, December 22, 2024

Latest Posts

ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಲ್ಲಿ ಅವಸರ ಮಾಡುವಂತಿಲ್ಲ; WHO

- Advertisement -

www.karnatakatv.net: ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮೊದಲು ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸುವಂತೆ ಡಬ್ಲೂ ಎಚ್ ಓ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಾಡಿರುವ ಟ್ವೀಟ್ ನಲ್ಲಿ “ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಲ್ಲಿ ಅವಸರ ಮಾಡುವಂತಿಲ್ಲ. ಲಸಿಕೆ ತಯಾರಕರು ಎಷ್ಟು ಬೇಗನೆ ಅಗತ್ಯವಾದ ಡೇಟಾವನ್ನು ಒದಗಿಸಲು ಸಾಧ್ಯವಾಯಿತು ಎಂಬುದರ ಮೇಲೆ ಅದರ ತುರ್ತು ಬಳಕೆಯ ಪಟ್ಟಿಗೆ ಸೇರಿಸುವ ಕಾಲಮಿತಿಯು ನಿರ್ಧಾರವಾಗುತ್ತದೆ,” ಎಂದು ತಿಳಿಸಿದ್ದಾರೆ. ಕೊವಿಡ್-೧೯ ಲಸಿಕೆಗಳಲ್ಲಿ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯೂ ಸಹ ಸೇರಿದ್ದು,

“ಕೊರೊನಾವೈರಸ್ ವಿರುದ್ಧ ತುರ್ತು ಬಳಕೆಯ ಲಸಿಕೆಗಳ ಪಟ್ಟಿಯಲ್ಲಿ ಕೋವಾಕ್ಸಿನ್‌ಗೆ ಅನುಮೋದನೆ ನೀಡುವ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎಂದು ನಮಗೆ ತಿಳಿದಿದೆ, ಆದರೆ ನಾವು ಯಾವುದೇ ಕಾರಣಕ್ಕೂ ಅವಸರ ಮಾಡುವಂತಿಲ್ಲ. ತುರ್ತು ಬಳಕೆಗಾಗಿ ಉತ್ಪನ್ನವನ್ನು ಶಿಫಾರಸು ಮಾಡುವ ಮೊದಲು, ಅದರ ಪರಿಣಾಮಕಾರಿತ್ವ ಹಾಗೂ ಸುರಕ್ಷಿತೆಯನ್ನು ಖಚಿತಪಡಿಸಿಕೊಳ್ಳಲು ಅದನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಬೇಕಿದೆ,” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

- Advertisement -

Latest Posts

Don't Miss