ಅನಾಥಮಕ್ಕಳ ಜೊತೆ ಅದ್ಧೂರಿ Birthday ಮಾಡಿದ್ರೆ ಶಿಕ್ಷಾರ್ಹ ಅಪರಾಧ..!

www.karnatakatv.net : ಜನರು ತಮ್ಮ ಹುಟ್ಟು ಹಬ್ಬವನ್ನು ಅನಾಥ ಮಕ್ಕಳ ಜೊತೆ ಸೇರಿ ಆಚರಿಸಬಾರದು ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯ ತಿಳಿಸಿದೆ.

ಹೌದು.. ಈಗಿನ ಕಾಲದಲ್ಲಿ ಜನರು ತಮ್ಮ ತಮ್ಮ ಹುಟ್ಟುಹಬ್ಬವನ್ನು ಅನಾಥಾಶ್ರಮದಲ್ಲಿ ಆಚರಿಸುವುದು ಒಂದು ಟ್ರೆಂಡ್ ಆಗಿದೆ, ಆದರೆ ಹೀಗೆಲ್ಲ ಮಾಡಿದ್ರೆ ಅನಾಥ ಮಕ್ಕಳ ಮನಸ್ಸಿನಲ್ಲಿ ಅಸಮಾನತೆ ಮೂಡಿ ತಾವು ಕೀಳೆಂಬ ಭಾವನೆ ಬರಬಹುದು ಮತ್ತು ತಾರತಮ್ಯ ಭಾನೆ ಹೆಚ್ಚಾಗಿ ಖಿನ್ನತೆಗೆ ಕಾರಣಾಗಬಹುದು ಎನ್ನುವ ಉದ್ದೇಶದಿಂದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಅದ್ಧೂರಿಯಾಗಿ ಬರ್ತ್ಡೇ ಆಚರಿಸಬಾರದು ಎಂದು ತಿಳಿಸಿದ್ದಾರೆ. ಇನ್ನು ಮುಂದೆ ಈ ರೀತಿಯ ಆಚರಣೆ ಕಂಡು ಬಂದರೆ ಶಿಕ್ಷಾರ್ಹ ಅಪರಾಧವಾಗಿ ಘೋಷಣೆ ಮಾಡಲಾಗುತ್ತದೆ.

ಅನಾಥ ಮಕ್ಕಳು, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಮಕ್ಕಳು, ಭಿಕ್ಷಾಟನೆಯಿಂದ ಹೊರಬಂದ ಮಕ್ಕಳು, ಬಾಲ್ಯವಿವಾಹಕ್ಕೆ ಒಳಗಾಗಿ ರಕ್ಷಿಸಲ್ಪಟ್ಟ ಮಕ್ಕಳು, ಮಾನಸಿಕ ಅಸ್ವಸ್ಥ ಮಕ್ಕಳು ಸೇರಿ ಅಬಲ ಮಕ್ಕಳ ಜೊತೆಗೆ ಇನ್ನು ಮುಂದೆ ಹುಟ್ಟುಹಬ್ಬ ಆಚರಿಸುವಂತಿಲ್ಲ. ಅದ್ಧೂರಿ ಬರ್ತ್ಡೇ ಬಗ್ಗೆ ಮಕ್ಕಳ ರಕ್ಷಣಾ ನಿರ್ದೇಶನಾಯ ಸೂಕ್ಷ್ಮವಾಗಿ ಗಮನಿಸಿ ಈ ನಿರ್ಧಾರ ಕೈಗೊಂಡಿದೆ.

About The Author