www.karnatakatv.net: ಡೊನಾಲ್ಡ್ ಟ್ರಂಪ್ ತನ್ನದೇ ಆದ ಹೊಸ ಸಾಮಾಜಿಕ ಜಾಲತಾಣವನ್ನು ಆರಂಭಿಸಲಿದ್ದು, ನವೆಂಬರ್‌ನಲ್ಲಿ ಅದನ್ನು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎಂದು ಮಾಹಿತಿಯು ಲಭ್ಯವಾಗಿದೆ.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘TRUTH Social’ ಎನ್ನುವ ನೂತನ ಸಾಮಾಜಿಕ ಜಾಲತಾಣವನ್ನು ಆರಂಭಿಸಲಿದ್ದಾರೆ. ತಾಲಿಬಾನಿಗಳೇ ಹೆಚ್ಚು ತುಂಬಿರುವ ಟ್ವಿಟ್ಟರ್‌ನ್ನು ನಾವು ಬಳಕೆ ಮಾಡುತ್ತಿದ್ದೇವೆ, ಇಷ್ಟಾದರೂ ಅಮೆರಿಕದ ಅಧ್ಯಕ್ಷರು ಮೌನವಾಗಿದ್ದಾರೆ ಇದು ಸ್ವೀಕಾರಾರ್ಹವಲ್ಲ ಎಂದರು. ಟ್ರಂಪ್ ಮೀಡಿಯಾ ಆಂಡ್ ಟೆಕ್ನಾಲಜಿ ಗ್ರೂಪ್‌ನ ಒಡೆತನದಲ್ಲಿದೆ, ನಾನ್ ವೇಕ್ ಎಂಟರ್‌ಟೈನ್ಮೆoಟ್ ಪ್ರೋಗ್ರಾಮಿಂಗ್ ಅನ್ನು ಒಳಗೊಂಡಿರುವ ಸಬ್‌ಸ್ಕ್ರಿಪ್ಷನ್ ವಿಡಿಯೋ- ಆನ್ ಡಿಮ್ಯಾಂಡ್ ಸೇವೆಯನ್ನು ಕೂಡ ಪ್ರಾರಂಭಿಸಲಾಗುವುದು ಎಂದು ವಿವರಿಸಿದರು.
ಜನವರಿಯಲ್ಲಿ ಟ್ರಂಪ್ ಅವರನ್ನು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ನಿಂದ 6 ತಿಂಗಳು ವಜಾಗೊಳಿಸಿದ ಬಳಿಕ ಈ ಬೆಳವಣಿಗೆಗಳು ನಡೆದಿವೆ. ಕ್ಯಾಪಿಟಲ್ ಹಿಲ್ ಗಲಭೆ ಬೆನ್ನಲ್ಲೇ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷೇಧಿಸಲಾಗಿತ್ತು. ಡೋನಾಲ್ಡ್ ಟ್ರಂಪ್ ಮೇಲೆ ಫೇಸ್‌ಬುಕ್, ಟ್ವಿಟರ್ ಹೇರಿರುವ ನಿರ್ಬಂಧವನ್ನು ಮತ್ತಷ್ಟು ಕಠಿಣಗೊಳಿಸಿದೆ. ಈ ಮೂಲಕ ಟ್ರಂಪ್ ಇನ್ನೆಂದು ಸಾಮಾಜಿಕ ಜಾಲತಾಣ ಬಳಕೆ ಮಾಡುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಸೊಸೆಯ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಂಡ ಟ್ರಂಪ್‌ಗೆ ಮತ್ತೆ ನಿರ್ಬಂಧ ಹೇರಲಾಗಿತ್ತು. ಇಷ್ಟೇ ಅಲ್ಲ ಸೊಸೆಗೆ ನೊಟೀಸ್ ನೀಡುವ ಮೂಲಕ ಟ್ರಂಪ್ ವಿರುದ್ಧದ ನಿಲುವನ್ನು ಮತ್ತಷ್ಟು ಕಠಿಣಗೊಳಿಸಲಾಗಿತ್ತು. ಟ್ರಂಪ್ ಪುತ್ರ ಎರಿಕ್ ಪತ್ನಿ ಲಾರಾ ಟ್ರಂಪ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಡೋನಾಲ್ಡ್ ಟ್ರಂಪ್ ಸಂದರ್ಶನದ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮಾಡಿದ ಬೆನ್ನಲ್ಲೇ ಲಾರಾ ಟ್ರಂಪ್ ಇ ಮೇಲ್‌ಗೆ ಫೇಸ್‌ಬುಕ್ ನೊಟೀಸ್ ನೀಡಿದೆ. `ನೀವು ಪೋಸ್ಟ್ ಮಾಡಿದ ವಿಡಿಯೋಗಳನ್ನು ತೆಗೆದುಹಾಕಲಾಗುತ್ತಿದೆ. ಇದರಲ್ಲಿ ನಿಷೇಧಿತ ಡೋನಾಲ್ಡ್ ಟ್ರಂಪ್ ಧ್ವನಿ ಇದೆ’ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಬ್ಲಾಕ್ ಮಾಡಿದ ಕಾರಣ ಟ್ರಂಪ್ ತಮ್ಮದೇ ಆದ ಸಾಮಾಜಿಕ ಜಾಲತಾಣ ಹುಟ್ಟುಹಾಕಲು ಮುಂದಾಗಿದ್ದರು. ಈ ಕುರಿತು ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಚುನಾವಣೆಯಲ್ಲಿ ಟ್ರಂಪ್ ಪ್ರಚಾರದ ಜವಾಬ್ದಾರಿ ನಿರ್ವಹಿಸಿದ್ದ ಜೇಸನ್ ಮಿಲ್ಲರ್ ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಟ್ರಂಪ್‌ರ ಅಮಾನತು ಎಂದರೆ ಅವರ ಖಾತೆಯು ಮೂಲಭೂತವಾಗಿ ‘ಫೇಸ್‌ಬುಕ್ ಜೈಲಿನಲ್ಲಿದ್ದಂತೆ. ಅಲ್ಲಿ ಇತರರು ಹಿಂದಿನ ಪೋಸ್ಟ್ಗಳನ್ನು ಓದಬಹುದು ಮತ್ತು ಕಾಮೆಂಟ್ ಮಾಡಬಹುದಾಗಿದೆ.