Tuesday, July 22, 2025

Latest Posts

ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಘೋಷಣೆ; ಅಮರಿಂದರ ಸಿಂಗ್

- Advertisement -

www.karnatakatv.net: ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಘೋಷಣೆ ಮಾಡುತ್ತೇನೆ ಎಂದು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರಿಂದರ ಸಿಂಗ್ ಹೇಳಿದ್ದಾರೆ.

ಇದರ ಕುರಿತಾಗಿ ವಕೀಲರು ತಮ್ಮ ಕೆಲಸದಲ್ಲಿ ತೊಡಗಿದ್ದು, ಚಂಡೀಗಢದಲ್ಲಿoದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಯ ಬಂದಾಗ 117 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಸೀಟು ಹಂಚಿಕೆ ಅಥವಾ ನಾವೇ ಸ್ವಂತವಾಗಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಎಂದು ನೋಡಬೇಕು ಎಂದರು. ಕೇಂದ್ರ ಸರ್ಕಾರದ ತಿದ್ದುಪಡಿ ಕೃಷಿ ಕಾಯ್ದೆ ಬಗ್ಗೆ ನಿಮ್ಮ ನಿಲುವೇನು, ರೈತರ ಪರ ಹೇಗೆ ನಿಲ್ಲುತ್ತೀರಿ ಎಂದು ಪ್ರಶ್ನೆಯನ್ನು ಕೇಳಿದಾಗ ನಮ್ಮ ಜೊತೆ 25ರಿಂದ 30 ಮಂದಿಯನ್ನು ಕರೆದುಕೊಂಡು ನಾಳೆ ದೆಹಲಿಗೆ ಹೋಗಿ ಗೃಹ ಸಚಿವರನ್ನು ಭೇಟಿ ಮಾಡುತ್ತೇವೆ, ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಬಳಿ ಚರ್ಚಿಸುತ್ತೇವೆ ಎಂದರು.

ಭದ್ರತಾ ಕ್ರಮಗಳ ಬಗ್ಗೆ ಅವರು ನನ್ನನ್ನು ಅಣಕಿಸುತ್ತಾರೆ, ನಾನು ಸೇನೆಯಲ್ಲಿ ಮೂಲ ತರಬೇತಿಯನ್ನು ಸೈನಿಕನಾಗಿ ಪಡೆದಿದ್ದು 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ತರಬೇತಿ ದಿನಗಳಿಂದ ಸೇನೆಯನ್ನು ತ್ಯಜಿಸುವವರೆಗೆ ನಾನು ಮೂಲ ಅವಶ್ಯಕತೆಗಳ, ಮೂಲ ಸ್ಥಿತಿಗಳ ಬಗ್ಗೆ ತಿಳಿದಿದ್ದೇನೆ ಎಂದು ಹೆಸರು ಹೇಳದೆ ಕಾಂಗ್ರೆಸ್ ನಾಯಕರಿಗೆ ಕ್ಯಾ.ಅಮರಿಂದರ್ ಸಿಂಗ್ ತಿರುಗೇಟು ನೀಡಿದರು.

- Advertisement -

Latest Posts

Don't Miss