Saturday, October 19, 2024

Latest Posts

ದೇಶಾದ್ಯಂತ ಹೆಚ್ಚುವರಿ ಪೆಟ್ರೋಲ್ ಬಂಕ್ ಗಳನ್ನು ತೆರಯೋ ಚಿಂತನೆ..!

- Advertisement -

www.karnatakatv.net: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿಸೋ ಮೂಲಕ ಕೇಂದ್ರ ಸರ್ಕಾರ ಜನರ ತಾಳ್ಮೆ ಪರೀಕ್ಷೆ ಮಾಡ್ತಿದೆ. ಕೇಂದ್ರ ಸರ್ಕಾರ ಒಂದೆರಡು ರೂಪಾಯಿ ಕೂಡ ಬೆಲೆ ಕಡಿಮೆ ಮಾಡೋದಕ್ಕೆ ಕಿಂಚಿತ್ತೂ ಕಾಳಜಿ ವಹಿಸ್ತಿಲ್ಲ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮತ್ತೆ ದೇಶಾದ್ಯಂತ ಹೆಚ್ಚುವರಿ ಪೆಟ್ರೋಲ್ ಬಂಕ್ ಗಳನ್ನು ತೆರೆಯೋ ಸಾಹಸಕ್ಕೆ ಕೈಹಾಕಿದೆ.

ಹೌದು, ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿರೋ ಪೆಟ್ರೋಲ್ ಬಂಕ್ ಗಳು ಸಾಲದು ಅಂತ ಇದೀಗ ಕೇಂದ್ರ ಸರ್ಕಾರ ಮತ್ತಷ್ಟು ಪೆಟ್ರೋಲ್ ಬಂಕ್ ಗಳನ್ನು ತೆರೆಯೋದಕ್ಕೆ ಚಿಂತನೆ ನಡೆಸಿದೆ. ಇದಕ್ಕೆ ಕಾರಣ ಏನಪ್ಪಾ ಅಂದ್ರೆ, ಕೆಲವರಿಗೆ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಶೌಚಾಲಯ, ಪೆಟ್ರೋಲ್, ಡೀಸೆಲ್ ಪಂಪ್ ಗಾಗಿ ಪರದಾಡುತ್ತಿದ್ದಾರೆ, ಹೀಗಾಗಿ ಚಿಕ್ಕ ಡಾಬಾ ಗಳಲ್ಲಿ ಆಹಾರದ ಜೊತೆಗೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳೋದಕ್ಕೆ ಸುಲಭವಾಗುವಂತೆ ಮಾಡ್ತೀವಿ ಅಂತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.

ಇನ್ನು ತಾನು ಪ್ರಯಾಣ ಮಾಡೋವಾಗ 200-300 ಕಿ.ಮೀ ವರೆಗೂ ಹೆದ್ದಾರಿಯಲ್ಲಿ ಒಂದೇ ಒಂದು ಶೌಚಾಲಯವಿಲ್ಲ ಅಂತ ಸಚಿವ ನಿತಿನ್ ಗಡ್ಕರಿಗೆ ಯಾರೊ ಒಬ್ಬರು ಸಂದೇಶ ಕಳುಹಿಸಿದ್ರಂತೆ . ಹೀಗಾಗಿ ನಿತಿನ್ ಗಡ್ಕರಿ ಡಾಬಾಗಳಲ್ಲೂ ಪೆಟ್ರೋಲ್ ಬಂಕ್ ತೆರೆಯೋದಕ್ಕೆ ಡಿಸೈಡ್ ಮಾಡಿದ್ರಂತೆ.
ಒಟ್ಟಾರೆ, ಪೆಟ್ರೋಲ್ -ಡೀಸೆಲ್ ಬೆಲೆ ಇಳಿಸ್ರಪ್ಪಾ ಅಂತ ಜನ ತಲೆ ತಲೆ ಚೆಚ್ಚಿಕೊಳ್ತಿದ್ರೆ, ಇತ್ತ ಸರ್ಕಾರ ಮಾತ್ರ ಸೈಲೆಂಟ್ ಆಗಿ ಇನ್ನಷ್ಟು ಪೆಟ್ರೋಲ್ ಬಂಕ್ ಗಳನ್ನ ತೆರೆಯೋದಕ್ಕೆ ಹೊರಟಿರೋದಕ್ಕೆ ಏನ್ ಅನ್ಬೇಕೋ ಗೊತ್ತಾಗ್ತಿಲ್ಲ.

- Advertisement -

Latest Posts

Don't Miss