www.karnatakatv.net: ಪುನೀತ್ ರಾಜ್ ಕುಮಾರ್ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಅಂತ ಬೆಂಗಳೂರಿನ ವಿಕ್ರಂ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಮಾಧ್ಯಮಕ್ಕೆ ಮಾಹಿತಿ ನೀಡಿರೋ ವಿಕ್ರಂ ಆಸ್ಪತ್ರೆ ವೈದ್ಯ ಡಾ. ರಂಗನಾಥ್ , ಇಂದು ಬೆಳಗ್ಗೆ 11.30ಕ್ಕೆ ಎದೆ ನೋವು ಅಂತ ನಟ ಪುನೀತ್ ರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅದಾಗಲೇ ಕುಟುಂಬಸ್ಥರು ಇಸಿಜಿ ಮಾಡಿಸಿ ಹೃದಯಾಘಾತವಾಗಿರೋದು ಖಚಿತವಾಗಿತ್ತು. ಮತ್ತೊಂದು ಬಾರಿ ನಾವೂ ಇಜಿಸಿ ಮಾಡಿದೆವು. ಆದ್ರೆ ಅವರು ಆಸ್ಪತ್ರೆಗೆ ದಾಖಲಾಗೋವಾಗಲೇ ಗಂಭೀರ ಸ್ಥಿತಿಯಲ್ಲಿದ್ರು. ಅವರ ಆರೋಗ್ಯ ಸ್ಥಿತಿ ಬಗ್ಗೆ ಸದ್ಯಕ್ಕೆ ಏನೂ ಹೇಳೋದಕ್ಕೆ ಸಾಧ್ಯವಿಲ್ಲ
ಅವರನ್ನು ಉಳಿಸಿಕೊಳ್ಳೋದಕ್ಕೆ ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಅಗತ್ಯವಾದ ಎಲ್ಲಾ ಚಿಕಿತ್ಸೆ ಮುಂದುವರೆಸುತ್ತಿದ್ದೇವೆ. ನಟ ಪುನೀತ್ ಗೆ ಹೃದಯಾಘಾತ ಹೊರತುಪಡಿಸಿ ಬೇರ್ಯಾವ ತೊಂದರೆ ಇಲ್ಲ ಅಂತ ಡಾ. ರಂಗನಾಥ್ ಮಾಹಿತಿ ನೀಡಿದ್ದಾರೆ.




