www.karnatakatv.net: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಿನ್ನೆಯಿಂದಲೂ ನಟ ಪುನೀತ್ ರಾಜ್ ಕುಮಾರ್ ರವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಇನ್ನು ಇಂದು ಸಂಜೆಯೇ ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ 3 ಗಂಟೆ ಹೊತ್ತಿಗೆ ಕಂಠೀರವ ಕ್ರೀಡಾಂಗಣದಿoದ ಅಪ್ಪು ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ.
ಪಾರ್ಥಿವ ಶರೀರ ಹೊತ್ತ ವಾಹನ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಬೆಂಗಳೂರಿನ ಲಗ್ಗೆರೆ ರಿಂಗ್ ರೋಡ್ ಬಳಿಯಿಂದ ಹೊರಡಲಿರುವ ಮೆರವಣಿಗೆ, ಕಾರ್ಪೊರೇಷನ್ ಬ್ಯಾಂಕ್, ಮೈಸೂರು ಸರ್ಕಲ್, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ಕೆರೆ, ಮಲ್ಲೇಶ್ವರಂ ನ ಸರ್ಕಲ್ ಮಾರಮ್ಮ ದೇವಸ್ಥಾನ, ಯಶವಂತಪುರ, ಗೋವರ್ಧನ್ ಥಿಯೇಟರ್, ಆರ್ ಎಂಸಿ ಯಾರ್ಡ್, ಗೊರಗುಂಟೆ ಪಾಳ್ಯದ ಮಾರ್ಗವಾಗಿ ಸಾಗಿ ಕಂಠೀರವ ಸ್ಟುಡಿಯೋ ತಲುಪಲಿದೆ.
ಆ ವೇಳೆ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಲಿದ್ದು, ಸಂಜೆ 6 ಗಂಟೆ ನಂತರ ಪುನೀತ್ ರಾಜ್ ಕುಮಾರ್ ರವರ ಅಂತ್ಯಕ್ರಿಯೆ ನೆರವೇರಲಿದೆ.