- Advertisement -
www.karnatakatv.net: ಬೆಂಗಳೂರು: ರಾಜ್ಯಾದ್ಯಂತ ಪುನೀತ್ ರಾಜ್ ಕುಮಾರ್ ಅಗಲಿಕೆಗೆ ಶೋಕ ಮಡುಗಟ್ಟಿದೆ. ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿದ್ದಾರೆ. ಕೆಲವರು ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೆ ತಾವಿದ್ದಲ್ಲಿಯೇ ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಇನ್ನು ಫಿಡಿಲಿಟಸ್ ಗ್ಯಾಲರಿಯ ಚಿತ್ರಕಾರ ಕೋಟೆಗದ್ದೆ ರವಿ ಕೂಡ ಅಪ್ಪು ಫೋಟೋವನ್ನ ಪೇಂಟಿoಗ್ ಮಾಡೋ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಿಡಿ ಕುಂಚದಿoದ ಅರಳಿದ ಸ್ಪೀಡ್ ಪೇಂಟಿoಗ್ ಮೂಲಕ ದಿವಂಗತ ನಟ ಪುನೀತ್ ರಾಜ್ ಕುಮಾರ್ ರವರಿಗೆ ಈ ಕಲಾವಿದ ಗೌರವ ನಮನ ಸಲ್ಲಿಸಿದ್ದಾರೆ.
ಕರ್ನಾಟಕ ಟಿವಿ- ಬೆಂಗಳೂರು
- Advertisement -