www.karnatakatv.net : ದೊಡ್ಮನೆಯ ಪ್ರೀತಿಯ ಕುಡಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ನಿಧನದಿಂದಾಗಿ ಇಡೀ ಕರುನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ. ಅಷ್ಟು ಗಟ್ಟಿ ಮುಟ್ಟಾದ ದೇಹ ಹೊಂದಿದ್ದ ಅಪ್ಪು ಈ ರೀತಿ ದಿಢೀರನೆ ಸಾವನ್ನಪ್ಪಿರೋದು ಆಘಾತ ಮೂಡಿಸಿದೆ. ಆದ್ರೆ ಈ ಮಧ್ಯೆ ಪುನೀತ್ ರಾಜ್ ಕುಮಾರ್ ಹುಟ್ಟಿದ ತಾರೀಖಿನ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ.
ಹೌದು ಪುನೀತ್ ರಾಜ್ ಕುಮಾರ್ ಹುಟ್ಟಿದ್ದು 1975ರ ಮಾರ್ಚ್ ತಿಂಗಳ 17ನೇ ತಾರೀಖಿನಂದು. ತಮ್ಮ 46ನೇ ವಯಸ್ಸಿಗೆ ಅತ್ಯುತ್ತಮ ಸಾಧನೆ ಮಾಡಿದ್ದ ಪವರ್ ಸ್ಟಾರ್ ಪುನೀತ್ ಕೋಟ್ಯಂತರ ಅಭಿಮಾನಿಗಳನ್ನು ತೊರೆದು ಮತ್ತೆಂದೂ ಬಾರದ ಲೋಕಕ್ಕೆ ಹೋಗಿದ್ದಾರೆ. ಆದ್ರೆ ಪುನೀತ್ ರಾಜ್ ಕುಮಾರ್ ರವರ ಸಾವಿಗೂ ಮತ್ತು ಅವರು ಹುಟ್ಟಿದ ದಿನಾಂಕಕ್ಕೂ ಏನೋ ಸಂಬoಧವಿದೆ ಅನ್ನೋ ವಿಚಾರ ಸದ್ಯ ತೀವ್ರ ಚರ್ಚೆಯಾಗ್ತಿದೆ. ಯಾಕಂದ್ರೆ 17ನೇ ತಾರೀಖಿನಂದು ಹುಟ್ಟಿದ ನಟರು ಅತಿ ಚಿಕ್ಕವಯಸ್ಸಿಗೆ ಸಾವನ್ನಪ್ಪುತ್ತಿರೋದು ತೀವ್ರ ಆತಂಕ ಹಾಗೂ ಅಚ್ಚರಿ ಮೂಡಿಸುವಂತೆ ಮಾಡ್ತಿದೆ.
ಹೌದು, ಹೀಗೆ ನೋಡಿದ್ರೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹುಟ್ಟಿದ್ದು ಕೂಡ 17ನೇ ತಾರೀಖಿನಂದು. ಸ್ಯಾಂಡಲ್ ವುಡ್ ನ ಈ ಅತ್ಯಂತ ಶ್ರೇಷ್ಠ ನಟ ಕೂಡ ತಮ್ಮ 38ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ರು. ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಕಡೆಗೆ ಪ್ರಾಣ ಚೆಲ್ಲಿದ್ರು.
ತಾವು ನಟಿಸಿದ ಕೆಲವೇ ಚಿತ್ರಗಳಿಂದಲೇ ಅಪಾರ ಕೀರ್ತಿ ಪಡೆದಿದ್ದ ಅದ್ಭುತ ನಟ ಸಂಚಾರಿ ವಿಜಯ್ ವಯಸ್ಸಲ್ಲದ ವಯಸ್ಸಲ್ಲಿ ಸಾವನ್ನಪ್ಪಿದ್ರು.
ಇನ್ನು ಸ್ಯಾಂಡಲ್ ವುಡ್ ನ ಮೋಸ್ಟ್ ಪ್ರಾಮಿಸಿಂಗ್ ಹೀರೋ ಆಗಿದ್ದ ಚಿರಂಜೀವಿ ಸರ್ಜಾ ಜನಿಸಿದ್ದು ಕೂಡ 17ನೇ ತಾರೀಖಿನಂದೇ. 1984ರ ಅಕ್ಟೋಬರ್ 17ರಂದು ಜನಿಸಿದ್ದ ಚಿರು ಕೂಡ ತಮ್ಮ 37ನೇ ವಯಸ್ಸಿಗೇ ಸಾವನ್ನಪ್ಪಿದ್ರು. ಆರೋಗ್ಯ ಮತ್ತುಫಿಟ್ನೆಸ್ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸುತ್ತಿದ್ದ ಚಿರುರವರಿಗೂ ಕೂಡ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ರು.
ಇನ್ನು ಈ ಮೂವರೂ ಪ್ರತಿಭಾನ್ವಿತ ನಟರ ಸಾವಿಗೆ ಬೇರೆ ಬೇರೆ ಕಾರಣಗಳಿರಬಹುದು. ಆದ್ರೆ ಈ ಮೂವರು ಸ್ಟಾರ್ ನಟರು ಹುಟ್ಟಿದ್ದು 17ನೇ ತಾರೀಖಾದ್ದರಿಂದ, ಸದ್ಯ ಈ ನಂಬರ್ ಜನರಲ್ಲಿ ಆತಂಕ ಮೂಡಿಸಿದೆ. ಇಟಲಿಯಲ್ಲಿ ಜನ 17ನೇ ತಾರೀಖನ್ನು ಅಶುಭ ಅಂತ ಪರಿಗಣಿಸುತ್ತಾರೆ. ಹೀಗಾಗಿ ಪ್ರತಿ ತಿಂಗಳ 17ನೇ ತಾರೀಖಿನಂದು ಅಂಗಡಿ ಮಳಿಗೆಗಳನ್ನು ತೆರೆಯೋದೇ ಇಲ್ಲ.ತಮ್ಮ ವ್ಯಾಪಾರಕ್ಕೆ ಯಾವು ದುಷ್ಟ ಶಕ್ತಿಯಿಂದಲೂ ತೊಂದರೆಯಾಗಬಾರದು ಅಂತ ಹೀಗೆ ಅಂದು ವ್ಯಾಪಾರ ಮಾಡೋ ರಿಸ್ಕ್ ತೆಗೆದುಕೊಳ್ಳೋದಿಲ್ವಂತೆ. ರೋಮನ್ ಸಂಖ್ಯೆಗಳಲ್ಲಿ 17ಕ್ಕೆ XVII ಅಂತ ಬರೆಯಲಾಗುತ್ತೆ. ಇನ್ನು ಈ ರೋಮನ್ ಸಂಖ್ಯೆಗಳನ್ನು ಮರು-ಜೋಡಿಸಿದಾಗ ‘VIXI’ ಅಂತ ರೂಪುಗೊಳ್ಳುತ್ತೆ. ಈ VIXI ಅಂದರೆ ಲ್ಯಾಟಿನ್ ಭಾಷೆಯಲ್ಲಿ ನನ್ನ ಜೀವನ ಈಗ ಪೂರ್ಣವಾಯಿತು ಅನ್ನೋ ಅರ್ಥ ಕೊಡುತ್ತದಂತೆ.
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮಿಂಚಿ ಮರೆಯಾದ ಈ ಮೂವರೂ ತಾರೆಯರೂ ಕೂಡ ಇದೇ ದಿನಾಂಕದoದು ಸಾವನ್ನಪ್ಪಿರೋದು ಈ 17ನೇ ತಾರೀಖು ಸ್ಯಾಂಡಲ್ ವುಡ್ ಪಾಲಿಗೂ ಅಶುಭವಾಗಿ ಕಾಡ್ತಿದೆ. ಇದು ಕಾಕತಾಳೀಯವಾದ್ರೂ, ಸಾವಿಗೆ ಬೇಕಾಗಿರೋದು ಒಂದು ನೆಪ ವಷ್ಟೆ ಅಲ್ವಾ…