ಪುನೀತ್ ರನ್ನು ರಾಜಕೀಯಕ್ಕೆ ತರುವ ಪ್ರಯತ್ನ ಮಾಡಿದ್ರು ಡಿಕೆಶಿ..!

www.karnatakatv.net: ಪುನೀತ್ ರಾಜ್ ಕುಮಾರ್ ರಲ್ಲಿ ಅನೇಕ ವಿಶೇಷತೆ ಇತ್ತು. ಅವರು ಕೇವಲ ಕಲಾವಿದನ ಹಾಗೆ ಬದುಕದೆ ಸಮಾಜ ಮುಖಿಯಾಗಿ ಸಾಕಷ್ಟು ಮಂದಿಗೆ ನೆರವು ನೀಡಿದ್ದಾರೆ. ಹೀಗಾಗಿ ಅವರನ್ನು ರಾಜಕೀಯ ರಂಗಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ಮಾಡಿದ್ದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಪುನೀತ್ ಅಂತ್ಯಕ್ರಿಯೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್ ಅತ್ಯದ್ಬುತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಪುನೀತ್ ರಾಜ್ ಕುಮಾರ್ ರವರಿಗೆ ಸಮಾಜಿಕ ಬದ್ಧತೆ ಇತ್ತು. ಸರ್ಕಾರದ ಕೆಲ ಜಾಹೀರಾತುಗಳಿಗೂ ಕೆಲಸ ಮಾಡಿದ್ದ ಅಪ್ಪು, ಬೇರೆ ನಟರ ರೀತಿ ಇದಕ್ಕಾಗಿ ಎಂದೂ ಹಣದ ಬೇಡಿಕೆ ಇಟ್ಟಿರಲಿಲ್ಲ. ಇನ್ನು ಪುನೀತ್ ರಾಜ್ ಕುಮಾರ್ ರವರ ಸಾಮಾಜಿಕ ಕಳಕಳಿಯಿಂದಾಗಿಯೇ ನಾವು ಅವರನ್ನ ರಾಜಕೀಯಕ್ಕೆ ಕರೆತರೋದಕ್ಕೆ ತುಂಬಾ ಪ್ರಯತ್ನ ಪಟ್ಟೆವು. ಆದ್ರೆ ಪುನೀತ್ ಮಾತ್ರ ಈ ಬಗ್ಗೆ ಆಸಕ್ತಿ ತೋರಲಿಲ್ಲ. ತಮ್ಮ ತಂದೆಯ ದಾರಿಯಲ್ಲೇ ನಡೆಯೋದಾಗಿ ಪುನೀತ್ ರಾಜ್ ಕುಮಾರ್ ಹೇಳಿದ್ರು.

ಬಳಿಕ ಮಾತನಾಡಿದ ಡಿಕೆಶಿ, ಮನೆಯ ಬಳಿ ಯಾವೊಬ್ಬ ಅಭಿಮಾನಿ ಬಂದ್ರೂ ಕೂಡ ಅವರನ್ನು ಭೇಟಿ ಮಾಡಿ ನಮಸ್ಕರಿಸಿಯೇ ಪುನೀತ್ ಹೋಗ್ತಿದ್ರು. ಈ ರೀತಿ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಯಾವ ಕಲಾವಿದನಲ್ಲಿಯೂ ನಾನು ಕಾಣಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಅಪ್ಪು ಎಲ್ಲರ ಮನದಲ್ಲಿಯೂ ಅಮರರಾಗಿರ್ತಾರೆ. ಅವರ ಈ ವ್ಯಕ್ತಿತ್ವ ಹೃದಯ ಶ್ರೀಮಂತಿಕೆ ಯನ್ನು ನೀವೂ ಕೂಡ ಉಳಿಸಿಕೊಂಡು ಹೋಗಬೇಕು ಅಂತ ಇತರೆ ನಟರಿಗೆ ಡಿಕೆ ಸಲಹೆ ನೀಡಿದ್ರು. ಮತ್ತೊಬ್ಬ ಪುನೀತ್ ಹುಟ್ಟಿಬರಬೇಕು. ರಾಜ್ಯದ ಸೇವೆ ಮಾಡೋದಕ್ಕೆ ರಾಜ್ ಕುಟುಂಬದಲ್ಲಿ ಮತ್ತೊಬ್ಬ ಪುನೀತ್ ಹುಟ್ಟಿಬರಲಿ ಅಂತ ಡಿಕೆಶಿವಕುಮಾರ್ ಹಾರೈಸಿದ್ದಾರೆ. ಸದ್ಯ ತಂದೆ ತಾಯಿ ಜೊತೆಗೆ ಪುನೀತ್ ರವರ ಅಂತ್ಯಕ್ರಿಯೆ ಮಾಡಲಾಗಿದೆ. ಆದ್ರೆ ಮತ್ತೆ ಇನ್ನೊಬ್ಬ ಪುನೀತ್ ಹುಟ್ಟೋದಕ್ಕೆ ಸಾಧ್ಯವೇ ಇಲ್ಲ ಅಂತ ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ರು.

About The Author