ನವದೆಹಲಿ: ಪ್ರಮಾಣವಚನ ಸ್ವೀಕಾರ ಬಳಿ ರಾಜ್ಯ ಸರ್ಕಾರ ಹಾಗೂ ಸಂಸದರ ಜವಾಬ್ದಾರಿ ಕುರಿತಾದ ತಮ್ಮ ಹೇಳಿಕೆಗೆ ಸಂಸದೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಸಂಸದೆ ಸುಮಲತಾ, ಕಾವೇರಿ ನದಿ ನೀರು ಹಂಚಿಕೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಈ ವಿಚಾರ ಕುರಿತಾಗಿ ಸಾಮೂಹಿಕ ಜವಾಬ್ದಾರಿ ಇರಬೇಕು. ಇದು ನಾನೊಬ್ಬಳೇ ನಿಂತ ಮಾಡುವ ಕೆಲಸವಲ್ಲ. ನಾವೆಲ್ಲರೂ ಒಂದಾಗಿ ಹೋರಾಟ ಮುಂದುವರಿಸಬೇಕಿದೆ. ರಾಜ್ಯ ಸರ್ಕಾರ ಕಾನೂನು ಹೋರಾಟ ಮಾಡಬೇಕಿದೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಪ್ರಮುಖವಾಗಿದೆ. ಇದು ಸಂಸದರ ಜವಾಬ್ದಾರಿ ಅಲ್ಲ ಅಂತ ನಾನು ಎಂದೂ ಹೇಳಿರಲಿಲ್ಲ. ಆ ರೀತಿ ಹೇಳಿಕೆ ನೀಡೋ ಅವಿವೇಕಿ ನಾನಲ್ಲ. ಇದು ರಾಜಕಾರಣ ಮಾಡುವ ಸಮಯವಲ್ಲ. ಮಂಡ್ಯ ಜನರಿಗೆ ನಾನೆಂದೂ ಮೋಸ ಮಾಡುವುದಿಲ್ಲ, ರೈತರಿಗೆ ನನ್ನ ಮೊದಲ ಆದ್ಯತೆ ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮೈಸೂರಲ್ಲಿ ಮಹಾರಾಜರ ಸಂಚಲನ..!! ಮಿಸ್ ಮಾಡದೇ ಈ ವಿಡಿಯೋ ನೋಡಿ