Saturday, July 12, 2025

Latest Posts

‘ಜನರ ನೆರವಿಗೆ ನಿಲ್ಲದ ನಿರ್ಲಜ್ಜ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದೇವೆ’

- Advertisement -

ಇಂದು ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ಸೌಧದ ಬಳಿ, ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಸರ್ಕಾರ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ  ಎಗ್ಗಿಲ್ಲದೇ ಸಾಗುತ್ತಿದೆ. ಇದು ನಿಲ್ಲಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕೊರೊನಾ, ಪ್ರವಾಹ ಕಾಲದಲ್ಲಿ ಜನರ ನೆರವಿಗೆ ನಿಲ್ಲದ ನಿರ್ಲಜ್ಜ ಸರ್ಕಾರಕ್ಕೆ ಬಿಸಿಮುಟ್ಟಿಸಿ, ಅವರ ಹೊಣೆಗಾರಿಕೆಯನ್ನು ಅರ್ಥಮಾಡಿಸಲು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧದ ವರೆಗೆ ಪ್ರತಿಭಟನೆ ನಡೆಸಿದೆವು ಎಂದು ಟ್ವಿಟ್ಟಿಸಿದ್ದಾರೆ.

ರಾಜ್ಯ ಸರ್ಕಾರ ಕೇಂದ್ರದ ಪರಿಹಾರ ಹಣಕ್ಕಾಗಿ ಕಾಯದೆ, ರಾಜ್ಯದ ಬೊಕ್ಕಸದಿಂದ ಕೂಡಲೇ ಅತಿವೃಷ್ಟಿ ಪರಿಹಾರಧನ ವಿತರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಅವರು ಸಲಹೆ ನೀಡಿದ್ದಾರೆ. ಅವರ ಮಾತನ್ನು ನಾನು ಸ್ವಾಗತಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

2019 ರಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರದ ಹಣ ನೀಡಿಲ್ಲ. ಅದಾದ ಮೇಲೆ ನಾಲ್ಕೈದು ಬಾರಿ ಪ್ರವಾಹ ಬಂದಿದೆ. ಜನ ಈ ಸರ್ಕಾರವನ್ನು ಬಿಟ್ ಕಾಯಿನ್ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಕರೆಯುತ್ತಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಉತ್ತುಂಗ ತಲುಪಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ .

ರಾಜ್ಯ ಗುತ್ತಿದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಬಿಜೆಪಿ ಸರ್ಕಾರವನ್ನು ಮಾತ್ರ ಉಲ್ಲೇಖಿಸಿ, 40% ಕಮಿಷನ್ ಆರೋಪ ಮಾಡಿದಾರೆಯೇ ವಿನಃ ನಮ್ಮ ಕಾಂಗ್ರೆಸ್ ಸರ್ಕಾರವನ್ನಲ್ಲ. ನಮ್ಮ ಸರ್ಕಾರದ ಅವಧಿಯ ಟೆಂಡರ್ ಪ್ರಕ್ರಿಯೆಗಳನ್ನೂ ಸೇರಿಸಿ ಕಳೆದ ಎಂಟೂವರೆ ವರ್ಷಗಳಲ್ಲಿ ನಡೆದಿರುವ ಎಲ್ಲಾ ಸರ್ಕಾರಿ ಕಾಮಗಾರಿಯ ಟೆಂಡರ್ ಗಳ ಬಗ್ಗೆ ಸೂಕ್ತ, ಪಾರದರ್ಶಕ ತನಿಖೆಯಾಗಲಿ. ತನಿಖೆಯನ್ನು ನ್ಯಾಯಮೂರ್ತಿಗಳು ಮಾಡಿದರೂ ಸರಿ, ಸದನ ಸಮಿತಿ ಮಾಡಿದರೂ ಸರಿ ಎಂದು ಸಿದ್ದರಾಮಯ್ಯ ತನಿಖೆಗೆ ಒತ್ತಾಯಿಸಿದ್ದಾರೆ..

- Advertisement -

Latest Posts

Don't Miss