‘ಓಕೆ ಬೈ.. ನನ್ನ ಮಕ್ಕಳನ್ನು ನಾನು ಎಂದಿಗಿಂತ ಹೆಚ್ಚು ಮುದ್ದಿಸಬೇಕು’

ಇದೇ ಡಿಸೆಂಬರ್‌ 13ರಂದು ಕರೀನಾ ಕಪೂರ್ ಮತ್ತು ಅಮೃತಾ ಅರೋರಾಗೆ ಕೊರೊನಾ ಲಕ್ಷಣವಿದ್ದರೂ ಕೂಡ ಇಬ್ಬರೂ ಬೇರೆ ಬೇರೆ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಮುಂಬೈ ಮಹಾನಗರ ಪಾಲಿಕೆಯವರು, ಮನೆಯಲ್ಲಿ ಕ್ವಾರಂಟೈನ್ ಆಗಬೇಕು ಎಂದು ಆದೇಶ ನೀಡಿದ್ದರು. ಇಲ್ಲವಾದಲ್ಲಿ ಪೊಲೀಸ್ ಕಂಪ್ಲೇಂಟ್ ನೀಡುವುದಾಗಿ ಹೇಳಿದ್ದರು. ಹಾಗಾಗಿ ಕರೀನಾ ಇಂದಿನವರೆಗೆ ಕ್ವಾರಂಟೈನ್‌ನಲ್ಲಿ ಇದ್ದರು. ಇಂದು ಅವರ ಕ್ವಾರಂಟೈನ್ ಮುಗಿದಿದ್ದು, ಅವರು ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಕಾತುರರಾಗಿದ್ದಾರೆಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಕರೀನಾ ಕಪೂರ್, ನಾನು ಕೋವಿಡ್ 19 ಟೆಸ್ಟ್ ಮಾಡಿಸಿದ್ದು, ಫಲಿತಾಂಶ ನೆಗೆಟಿವ್ ಎಂದು ಬಂದಿದೆ. ನಮ್ಮ ಈ ಕಷ್ಟಕಾಲದಲ್ಲಿ ನಮಗೆ ಬೆಂಬಲವಾಗಿ ನಿಂತ ಅಕ್ಕನಿಗೆ ಹೃತ್ಪೂರ್ವಕ ಧನ್ಯವಾದಗಳು. ಗೆಳತಿ ಅಮೃತಾ ನಾವು ಇದನ್ನು ಮಾಡಿ ತೋರಿಸಿದ್ದೇವೆ. ನಮಗಾಗಿ ಪ್ರಾರ್ಥಿಸಿದ ಚಿತ್ರರಂಗದವರಿಗೂ, ಸ್ನೇಹಿತರಿಗೂ ಧನ್ಯವಾದಗಳು.

ನಮಗಾಗಿ ಆಶೀರ್ವಾದದ ಸಂದೇಶ ಕಳುಹಿಸಿದ ಅಭಿಮಾನಿಗಳಿಗೂ, ನಮಗೆ ಒಳ್ಳೆಯ ಚಿಕಿತ್ಸೆ ನೀಡಿದ ಡಾಕ್ಟರ್ ಅವಿನಾಶ್ ಫಡ್ಕೆ ಲ್ಯಾಬ್ಸ್ ಅವರಿಗೂ ಧನ್ಯವಾದಗಳು. ಇನ್ನು ತನ್ನ ಕುಟುಂಬಸ್ಥರನ್ನು ಬಿಟ್ಟು ಇಷ್ಟು ದಿನ ತಾಳ್ಮೆಯಿಂದ ಹೊಟೇಲ್‌ ರೂಮ್‌ನಲ್ಲಿ ಕ್ವಾರಂಟೈನ್ ಆಗಿದ್ದ ನನ್ನ ಪತಿ ಸೈಫ್ ಅಲಿ ಖಾನ್‌ಗೂ ನನ್ನ ಪ್ರೀತಿಯ ಧನ್ಯವಾದಗಳು. ಎಲ್ಲರಿಗೂ ಹ್ಯಾಪಿ ಕ್ರಿಸ್‌ಮಸ್‌. ಸೇಫ್ ಆಗಿರಿ. ಓಕೆ ಬೈ.. ನಾನು ನನ್ನ ಇಬ್ಬರೂ ಮಕ್ಕಳನ್ನೂ ಎಂದಿಗಿಂತ ಹೆಚ್ಚಾಗಿ ಮುದ್ದಿಸಬೇಕು ಎಂದು ಬರೆದುಕೊಂಡಿದ್ದಾರೆ.

About The Author