ಕ್ರೀಡೆ : 2011ರ ವರ್ಲ್ಡ್ ಕಪ್ ಹೀರೋ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಕೈಗೆ ಗ್ಲೌಸ್ ತೊಟ್ಟು, ಕಾಲಿಗೆ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಝಲಕ್ ತೊರೋದಕ್ಕೆ ರೆಡಿಯಾಗ್ತಿದ್ದಾರೆ. ಅರೇ ಮೊನ್ನೆ ಮೊನ್ನೆ ತಾನೇ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರಲ್ಲಾ… ಕನ್ಫ್ಯೂಸ್ ಆಗಬೇಡಿ. ಈ ಬಾರಿ ಯುವಿ ಕಣಕ್ಕಿಳಿಯುತ್ತಿರೋದು ಭಾರತದಲ್ಲಲ್ಲ ಬದಲಾಗಿ ಕೆನಡಾದಲ್ಲಿ.
ಹೌದು ಇತ್ತೀಚಿಗಷ್ಟೇ ಎಲ್ಲ ಬಗೆಯ ಕ್ರಿಕೆಟಿಗೆ ವಿದಾಯ ಹೇಳಿದ್ದ ಯುವಿಗೆ ಕ್ರಿಕೆಟ್ ಮೇಲಿನ ಪ್ರೀತಿ ಸುಮ್ಮನೆ ಬಿಡಲಿಲ್ಲ. ಪರಿಣಾಮವಾಗಿಯೇ ಯುವರಾಜ್ ವಿದೇಶಗಳಲ್ಲಿ ನಡೆಯುವ ಲೀಗ್ ಪಂದ್ಯಗಳಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಬಿಸಿಸಿಐ ಗೆ ಮನವಿ ಮಾಡಿದ್ರು. ಬಿಸಿಸಿಐ ಕೂಡ ಯುವಿ ಮನವಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಹಾಗಾಗಿ ಮುಂದಿನ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಎರಡನೇ ಆವೃತ್ತಿಯ ಗ್ಲೋಬಲ್ ಟಿ-ಟ್ವೆಂಟಿ ಲೀಗ್ ನಲ್ಲಿ ಯುವರಾಜ್ ಕಣಕ್ಕಿಳಿಯಲಿದ್ದಾರೆ. ಜುಲೈ 25 ರಿಂದ ಆಗಸ್ಟ್ 11ರ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಭಾಗವಹಿಸಲಿರುವ ಯುವರಾಜ್ ಸಿಂಗ್ ಟೊರೊಂಟೊ ನ್ಯಾಷಿನಲ್ಸ್ ತಂಡದ ಪರ ಬ್ಯಾಟ್ ಬೀಸಲಿದ್ದಾರೆ.
ಒಟ್ಟಾರೆ ಕ್ರೀಡಾಂಗಣದಲ್ಲಿ ಯುವಿ ಬ್ಯಾಟಿಂಗ್ ವೈಭವವನ್ನ ನೋಡಬೇಕು ಅಂತಿದ್ದ ಅದೆಷ್ಟೋ ಅಭಿಮಾನಿಗಳಿಗೆ ಇದು ಖುಷಿಯ ವಿಷಯವಾಗಿದೆ..
ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ.
ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ