www.karnatakatv.net:ಭಾರೀ ಪೈಪೋಟಿಯಿಂದ ಕೂಡಿದ್ದ ರಾಜ್ಯ ಒಕ್ಕಲಿಗ ಸಂಘದ ಚುನಾವಣೆ ಮುಗಿದು, 35 ಘಟಾನುಘಟಿಗಳು ಗೆಲುವು ಸಾಧಿಸಿದ್ದರು. ಭಾರೀ ಕುತೂಹಲ ಕೆರಳಿಸಿದ್ದ ಸಂಘದ ಪಧಾದಿಕಾರಿಗಳ ಆಯ್ಕೆ ಇವತ್ತು ನಡೆದಿದ್ದು ಕಿಮ್ಸ್ ಆವರಣದಲ್ಲಿರೋ ಕೆಂಪೇಗೌಡ ಸಭಾಭವನದಲ್ಲಿ ಸಂಭ್ರಮದೊoದಿಗೆ ಸಂಘದ ಹೊಸ ಸಾರಥಿಗಳು ಪದವನ್ನೇರಿದರು. ನಿರೀಕ್ಷೆಯಂತೆಯೇ ದೊಡ್ಡಗೌಡರ ಕುಟುಂಬದ ಸಂಬoಧಿ ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ ಅಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನದ ತುರುಸಿನ ಪೈಪೋಟಿಯಲ್ಲಿ ಸಿ.ಎನ್ ಬಾಲಕೃಷ್ಣ(C.N.Balakrishna) ವಿರುದ್ಧ ಸ್ಪರ್ಧೆ ಮಾಡಿದ್ದ ಕೆಂಚಪ್ಪಗೌಡ 15 ಮತಗಳನ್ನು ಪಡದರೆ 20 ಮತಗಳನ್ನು ಪಡೆದು ಕೇವಲ ಐದು ಮತಗಳ ಅಂತರದಲ್ಲಿ ಆಯ್ಕೆಯಾದರು. ಅಂತೂ ಇಂತೂ ದೊಡ್ಡಗೌಡರ ಕುಟುಂಬ ಒಕ್ಕಲಿಗರ ಸಂಘದಲ್ಲಿ ತಮ್ಮದೇ ಹಿಡಿತವನ್ನು ಮತ್ತೆ ಸಾಧಿಸಿದ್ರೆ ಉಪಾಧ್ಯಕ್ಷರಾಗಿ ರೇಣುಕಾಪ್ರಸಾದ್ ಆಯ್ಕೆಯಾದ್ರು, ಮತ್ತೊಬ್ಬ ಉಪಾಧ್ಯಕ್ಷರಾಗಿ ಡಿ.ಹನುಮಂತಯ್ಯ,ಪ್ರಧಾನ ಕಾರ್ಯದರ್ಶಿಯಾಗಿ ಕೋನಪ್ಪ ರೆಡ್ಡಿ ಕೋಲಾರ ಮತ್ತು ಸಂಘದ ಖಜಾಂಚಿಯಾಗಿ ಆರ್. ಪ್ರಕಾಶ್ ಆಯ್ಕೆಯಾದರು. ಒಕ್ಕಲಿಗರ ಸಂಘದ ಸದಸ್ಯರಾಗಿ ಆಯ್ಕೆಯಾಗಿರುವ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಸಂಘಕ್ಕೆ ಆಯ್ಕೆಯಾಗಿರುವ ಖ್ಯಾತ ವೈದ್ಯ ಡಾ. ಅಂಜನಪ್ಪ ಅಭಿಮಾನಿಗಳು ನಗರದ ಚಾಮರಾಜಪೇಟೆಯ ಕಿಮ್ಸ್ ಬಳಿ ಇರುವ ಕುವೆಂಪು ಕಲಾಕ್ಷೇತ್ರದ ಬಳಿ ಸೇರಿ ಸಂಭ್ರಮಿಸಿದರು.
vokkaligara ಸಂಘದಲ್ಲಿ ದೊಡ್ಡಗೌಡರ ಕುಟುಂಬಕ್ಕೇ ದಕ್ಕಿದ ಪಟ್ಟ..!
- Advertisement -
- Advertisement -