karnataka ಸರ್ಕಾರ ಈಗ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಕನ್ನಡ ಚಲನ ಚಿತ್ರದ ಮೇರುನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲು ಮುಂದಾಗಿದೆ. ಈ ಪ್ರಸ್ಥಾವಕ್ಕೆ ಸಚಿವ ಸಂಪುಟದ ಪ್ರಸ್ತಾವವೂ ದೊರೆತಿದ್ದು. 12 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ವಿದಾನಸೌಧದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿಯವರು ತಿಳಿಸಿದ್ದಾರೆ. ಇದರ ಜೊತೆಗೆ ಹಲವಾರು ಕೆರೆಗಳಿಗೆ ನೀರು ಹರಿಸಲು ಇಂದು ಸಚಿವ ಸಂಪುಟ ಒಪ್ಪಿಕೋಂಡಿದ್ದು 92 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ .
ಬೆಂಗಳೂರಿನ 22 ಮತ್ತು ಹೊಸಕೋಟೆ ಕೆರೆಗೆ ನೀರು ತುಂಬಿಸುವ ಯೋಜನೆಗಳಿಗೆ ₹ 93 ಕೋಟಿ ಮಂಜೂರು ಮಾಡಲಾಗಿದೆ. ಕಾರ್ಕಳ ಕೋರ್ಟ್ ಕಟ್ಟಡಕ್ಕೆ ₹ 19 ಕೋಟಿ, ಕೋಲಾರದ ಮುಳಬಾಗಲು ಕೋರ್ಟ್ ಕಟ್ಟಡಕ್ಕೆ ₹ 16.3 ಕೋಟಿ, ದೊಡ್ಡಬಳ್ಳಾಪುರ ಮಾರುತಿ ಎಜುಕೇಶನ್ ಟ್ರಸ್ಟ್‌ಗೆ 2.8 ಎಕರೆ ಭೂಮಿ ಒದಗಿಸಲು ನಿಯಮಾವಳಿ ತಿದ್ದುಪಡಿ ಮಾಡಲು ಸಭೆ ನಿರ್ಧರಿಸಿತು.ಇವುಗಳ ಜೊತೆಗೆ ಅಂಬರೀಶ್ ಸ್ಮಾರಕ ಮತ್ತು ಕೆರೆಗಳಿಗೆ ನೀರು ಹರಿಸುವ ಮಹತ್ವದ ಕಾರ್ಯ ಯೋಜನೆಯನ್ನು ಶುರು ಮಾಡಲಾಗುವುದೆಂದು ತಿಳಿಸಲಾಗಿದೆ.