ಬಾಗಲಕೋಟೆ : ಕಾಂಗ್ರೆಸ್ ನಾಯಕರು ನಡೆಸುತ್ತಿರು ಮೇಕೆದಾಟು ಪಾದಯಾತ್ರೆಗೆ ಮತ್ತೊಂದು ದಾಖಲೆ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಟಾಂಗ್ ನೀಡಿದೆ.
ಬಾಗಲಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಮದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಆಡಳಿತ ಅವಧಿಯಲ್ಲಿನ ದಾಖಲೆ ಬಿಡುಗೆಡೆ ಮಾಡಿ ಟಾಂಗ್ ನೀಡಿದ್ದಾರೆ. ಈ ದಾಖಲೆಯನ್ನು ಬೆಂಗಳೂರಿನಲ್ಲೆ ಬೀಡುಗಡೆ ಮಾಡಿದ್ದೇನೆ.
2014 ರಲ್ಲೇ ಯೋಜನೆಗೆ ಅನುಮೋದನೆ ನೀಡಲಾಗಿದೆ. ಕಾನೂನು ಸಲಹೆ ಪಡೆದ ಮುಖ್ಯಮಂತ್ರಿಗಳು ಅನುಮೋದನೆ ಮಾಡಿದ್ದಾರೆ. ಅದರ ದಾಖಲೆ ನೀಡುತ್ತೆನೆ ಅದರಲ್ಲಿ ಏನಿದೇ ಅನುವುದು ಜನರಿಗೆ ಗೋತ್ತು ಆಗಲಿ ಎಂದು ಕಾರಜೋಳ ಹೇಳಿದರು. 12/11/2014 ರಂದು ಅನುಮೋದನೆ ನೀಡಿದ್ದರು ಯಾಕೆ ಪ್ರಾರಂಭ ಮಾಡಲಿಲ್ಲ. ಬರೀ ಡಿಪಿಆರ್ ಗೆ ನಾಲ್ಕು ವರ್ಷ ತಗೊಂಡಿದ್ಧಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಇವತ್ತು ಜಾಹಿರಾತ್ತು ಕೊಟ್ಟಿದ್ದಾರೆ. ಅವರಿಗೆ ಅದೇ ರೀತಿಯಲ್ಲಿ ಉತ್ತರ ಕೊಡುತ್ತೇನೆ.ಆದರೆ ನಾನು ಈಗ ಪ್ರವಾಸದಲ್ಲಿ ಇದ್ದೇನೆ ಮುಗಿದ ಬಳಿಕ ಉತ್ತರ ಕೋಡುತ್ತೇನೆ, ಆಡಳಿತ ಮಾಡುವವರಿಗೆ ಕನಿಷ್ಠ ಜ್ಞಾನ ಇರಬೇಕು ಅದು ಇಲ್ಲ .ಪಿಎಫ್.ಆರ್ ಕಳಿಸಬೇಕೋ? ಡಿಪಿಆರ್ ಕಳಿಸಬೇಕೋ? ಅನ್ನೋವ ಜ್ಞಾನ ಇರಬೇಕು. ಇವರು ಡಿಪಿಆರ್ ಕಳಿಸಿಕೊಡ್ತಾರೆ, ಕೇಂದ್ರದವರು ಅದನ್ನ ವಾಪಸ್ ಕಳಿಸುತ್ತಾರೆ. ಅದು ಡಿಪಿಆರ್ ಅಲ್ಲ ಪಿಎಫ್.ಆರ್ ಎಂದು ಕೇಂದ್ರ ಸರ್ಕಾರ ಹೇಳುತ್ತೆ. ಇವರು ಡಿಪಿಆರ್ ಕಳಿಸುತ್ತಾರೆ. ಪೂರ್ವ ಸಿದ್ಧತಾ ವರದಿ ಸಲ್ಲಿಸದೇ ಇವರು ಡ್ರಾಮ ಮಾಡಿ ಟಿಪಿಆರ್ ಕಳಿಸುತ್ತೀದ್ದರೆ. ಆಡಳಿತ ಮಾಡುವವರಿಗೆ ಏನು ಅನ್ನುವುದು ಎಂದು ದಾಖಲೆ ಬಿಡುಗಡೆ ಮಾಡಿದರು.




