Friday, September 20, 2024

Latest Posts

18 ವರ್ಷದ ದಾಂಪತ್ಯ ಅಂತ್ಯಗೊಳಿಸಿದ ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್..!

- Advertisement -

ತಮಿಳು ನಟ ಧನುಷ್ ಮತ್ತು ಐಶ್ವರ್ಯಾ ತಮ್ಮ 18 ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಿದ್ದಾರೆ. ಈ ಬಗ್ಗೆ ಇಬ್ಬರೂ ಟ್ವೀಟ್ ಮಾಡಿದ್ದು, 18 ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಹಿತೈಶಿಗಳಾಗಿ ಜೀವನ ನಡೆಸಿದ್ದೇವೆ. ಆದ್ರೆ ಈ 18 ವರ್ಷಗಳ ವೈವಾಹಿಕ ಜೀವನವನ್ನು ಇಲ್ಲಿಗೆ ಅಂತ್ಯ ಮಾಡಲು ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ, ಮತ್ತು ಇದನ್ನು ನಿಭಾಯಿಸಲು ನಮಗೆ ಅಗತ್ಯವಿರುವ ಗೌಪ್ಯತೆಯನ್ನು ನೀಡಿ ಎಂದಿದ್ದಾರೆ.

ನಟ ರಜನಿಕಾಂತ್ ಅವರ ಪುತ್ರಿಯಾಗಿರುವ ಐಶ್ವರ್ಯಾ, ನಟ ಧನುಷ್‌ರನ್ನ ನವೆಂಬರ್ 18 , 2004ರಲ್ಲಿ ವಿವಾಹವಾಗಿದ್ದರು. ಇವರಿಗೆ ಯಾತ್ರಾ ಮತ್ತು ಲಿಂಗಾ ಅನ್ನೋ ಇಬ್ಬರು ಗಂಡು ಮಕ್ಕಳಿದ್ದಾರೆ.  

- Advertisement -

Latest Posts

Don't Miss