Friday, November 14, 2025

Latest Posts

ವಾರ್ನರ್ಗೂ ‘ಶ್ರೀವಲ್ಲಿ’ಯದ್ದೇ ಗುಂಗು: ಕನ್ನಡಿಗರ ಮನಗೆದ್ದ ಡೇವಿಡ್…

- Advertisement -

ಈಗ ಎಲ್ಲಿ ನೋಡಿದರಲ್ಲಿ ಪುಷ್ಪ ಸಿನಿಮಾದ ಹಾಡುಗಳದ್ದೇ ಭರಾಟೆ. ಊ ಅಂತಿಯಾ ಮಾವಾ, ಸಾಮಿ ಮಾ ಸಾಮಿ, ಶ್ರೀವಲ್ಲಿ ಸಾಂಗ್‌ ಟ್ರೆಂಡ್ ಸೃಷ್ಟಿಸಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಎಲ್ಲಿ ನೋಡಿದರಲ್ಲಿ ಈ ಹಾಡುಗಳದ್ದೇ ದರ್ಬಾರ್ ಶುರುವಾಗಿದೆ. ಸಾಮಾನ್‌ಯ ಜನರಿಂದ ಹಿಡಿದು, ಸೆಲೆಬ್ರಿಟಿಗಳ ತನಕ ಎಲ್ಲರೂ ಈ ಸಿನಿಮಾದ ಹಾಡಿಗೆ ಹೆಜ್ಜೆ  ಹಾಕಿದ್ದಾರೆ. ಇನ್ನು ಕ್ರಿಕೇಟಿಗ ಡೇವಿಡ್ ವಾರ್ನ್‌ರ್‌ಗೂ ಶ್ರೀವಲ್ಲಿಯದ್ದೇ ಗುಂಗು.

ಡೆವಿಡ್ ವಾರ್ನರ್, ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದು, ಪುಷ್ಪರಾಜ್ ರೀತಿ ಆ್ಯಕ್ಟ್ ಮಾಡಿದ್ದಾರೆ. ಇನ್ನೂ ವಿಶೇಷ ಅಂದ್ರೆ ಈ ಚಿತ್ರದ ಹಾಡು ತೆಲುಗು, ತಮಿಳು, ಹಿಂದಿ, ಕನ್ನಡ ಎಲ್ಲ ಭಾಷೆಯಲ್ಲಿದೆ. ಆದ್‌ರೆ ವಾರ್ನರ್ ಕನ್ನಡದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಅವರ ಮೇಲಿದ್ದ ಅಬಿಮಾನ ದುಪ್ಪಟ್ಟಾಗಿದೆ. ಈ ವೀಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ 13,85,334 ಜನ ಲೈಕ್ ಮಾಡಿದ್ದಾರೆ. ಸ್ವತಃ ಅಲ್ಲು ಅರ್ಜುನ್ ಕೂಡ ಕಾಮೆಂಟ್ ಮಾಡಿದ್ದು, ಡೇವಿಡ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

https://www.instagram.com/reel/CY_KjWaJ-fh/?utm_source=ig_web_copy_link

ಪುಷ್ಪ ಸಿನಿಮಾ ರೀಲಿಸ್ ಆಗಿದ್ದ ಸಂದರ್ಭದಲ್ಲಿ, ಈ ಸಿನಿಮಾದ ಹಾಡನ್ನ ಡೇವಿಡ್ ಇಷ್ಟಪಟ್ಟಿದ್ದರು. ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ನಾನು ಪುಷ್ಪ ಸಿನಿಮಾದ ಯಾವ ಹಾಡಿಗೆ ಸ್ಟೆಪ್ ಹಾಕಲಿ ಅಂತಾ ಕೇಳಿದ್ರು, ಅದಕ್ಕೆ ಶ್ರೀವಲ್ಲಿ ಅಂತಾ ಸುಮಾರು ಜನ ಓಟ್ ಮಾಡಿದ್ರು. ಆಗ ಅದಕ್ಕೆ ಉತ್ತರಿಸಿದ್ದ ವಾರ್ನರ್, ಖಂಡಿತ ನಾನು ಪುಷ್ಪ ಸಿನಿಮಾದ ಹಾಡಿಗೆ ರಿಲ್ಸ್ ಮಾಡುತ್ತೇನೆ. ಮ್ಯಾಚ್ ಮುಗಿದ ಬಳಿಕ, ಈ ಹಾಡಿಗೆ ರೀಲ್ಸ್ ಮಾಡಿ, ಅಪ್ಲೋಡ್ ಮಾಡುತ್ತೇನೆಂದು ಹೇಳಿದ್ದರು.

https://www.instagram.com/p/CX-vvVMJKpx/

ಡೇವಿಡ್ ವಾರ್ನರ್ ಹೀಗೆ ರೀಲ್ಸ್ ಮಾಡ್ತಿರೋದು ಇದೇ ಮೊದಲಲ್ಲ. ಭಾರತೀಯ ಚಿತ್ರರಂಗವನ್ನ ಇಷ್ಟಪಡುವ ವಾರ್ನರ್, ಅಲ್ಲು ಅರ್ಜುನ್‌ರ ಬಿಗ್ ಫ್ಯಾನ್. ಈ ಮೊದಲು, ಸುಮಾರು ಹಾಡಿಗೆ ಫ್ಯಾಮಿಲಿ ಜೊತೆಗೂಡಿ ರೀಲ್ಸ್ ಮಾಡಿದ್ದಾರೆ. ತೆಲುಗು, ತಮಿಳು, ಹಿಂದಿ ಹಾಡಿಗೆ ಪತ್ನಿ ಮತ್ತು ತಮ್ಮ ಮೂವರು ಮಕ್ಕಳ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಹಾಗಾಗಿ ಇವರಿಗೆ ಫಿಲ್ಮ್‌ ಇಂಡಸ್ಟ್ರಿಯಲ್ಲೂ ಹೆವಿ ಫ್ಯಾನ್ಸ್ ಇದ್ದಾರೆ.

https://www.instagram.com/p/CXVv7sbJU1X/

- Advertisement -

Latest Posts

Don't Miss