ಇಂದು ನಾವು ಭಾರತದ ಅತ್ಯಂತ ಶ್ರೀಮಂತ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರು ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಕೋಟಿ ಕೋಟಿ ಆದಾಯವನ್ನು ಗಳಿಸುತ್ತಾರೆ. ಬಡತನದಿಂದ ಬಂದು ಸಿರಿವಂತರಾಗಿ ಬದುಕುತ್ತಿರುವ ಈ ಉದ್ಯಮಿಗಳ ಬಗ್ಗೆ ಚಿಕ್ಕ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯವರು ಮುಖೇಶ್ ಅಂಬಾನಿ. ಇವರ ವಾರ್ಷಿಕ ಆದಾಯ, 9,570 ಕೋಟಿ ರೂಪಾಯಿ ಇವರ ವಾರ್ಷಿಕ ಆದಾಯವಾಗಿದೆ. ರಿಲಯನ್ಸ್ ಕಂಪನಿಯ ಮಾಲೀಕರಾಗಿರುವ ಮುಖೇಶ್, ಹಲವಾರು ಉದ್ಯಮ ನಡೆಸುತ್ತಾರೆ. ಪತ್ನಿ ಅನಿತಾ ಅಂಬಾನಿ ಕೂಡ, ಮುಖೇಶ್ಗೆ ಸಾಥ್ ಕೊಡುತ್ತಿದ್ದು, ಪತಿಯ ಉದ್ಯಮದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ.
ಎರಡನೇಯದಾಗಿ ಗೌತಮ್ ಅದಾನಿ. 7,050 ಕೋಟಿ ರೂಪಾಯಿ ಇವರ ವಾರ್ಷಿಕ ಆದಾಯವಾಗಿದೆ. ಅದಾನಿ ಗ್ರೂಪ್ನ ಸಿ ಇ ಓ ಆಗಿರುವ ಗೌತಮ್ ಅದಾನಿ, ಹಲವಾರು ಉದ್ಯಮಗಳನ್ನು ನಡೆಸುತ್ತಾರೆ. ಬಡತನದಲ್ಲಿ ಹುಟ್ಟಿ, ಸಿರಿವಂತರಾದ ಅದಾನಿಗೆ 33 ವರ್ಷ ಉದ್ಯಮ ಜಗತ್ತಿನಲ್ಲಿ ಕೆಲಸ ಮಾಡಿದ ಅನುಭವವಿದೆ.
ಮೂರನೇಯವರು ಶಿವ ನಡಾರ್. 3,220 ಕೋಟಿ ರೂಪಾಯಿ ಇವರ ವಾರ್ಷಿಕ ಆದಾಯವಾಗಿದೆ. HCL ಎಂಟರ್ಪ್ರೈಸಸ್ನ ಫೌಂಡರ್ ಆಗಿರುವ ಶಿವ ನಡಾರ್ ಅವರ ಕಂಪೆನಿ, ಐಟಿ ಸರ್ವಿಸ್ ಒದಗಿಸುತ್ತದೆ.
ನಾಲ್ಕನೇಯದಾಗಿ ರಾಧಾಕೃಷ್ಣ ದಮಾನಿ. 2,180 ಕೋಟಿ ರೂಪಾಯಿ ಇವರ ವಾರ್ಷಿಕ ಆದಾಯವಾಗಿದೆ. ನಮಗೆಲ್ಲ ಕಡಿಮೆ ದರದಲ್ಲಿ ಸಾಮಗ್ರಿಗಳು ಸಿಗುವ ಸ್ಥಳವಾದ ಡಿ ಮಾರ್ಟ್ ಕಂಡು ಹಿಡಿದವರು ಇವರೇ. ಇಂದು ಮಧ್ಯಮಮ ವರ್ಗದವರೆಲ್ಲ, ಡಿ ಮಾರ್ಟ್ನಲ್ಲಿಯೇ ದಿನಸಿ ಸಾಮಗ್ರಿಗಳನ್ನ ತೆಗೆದುಕೊಳ್ಳುತ್ತಿದ್ದಾರೆ.
ಐದನೇಯದಾಗಿ ಲಕ್ಷ್ಮೀ ಮಿತ್ತಲ್. 1,830 ಕೋಟಿ ರೂಪಾಯಿ ಇವರ ವಾರ್ಷಿಕ ಆದಾಯವಾಗಿದೆ. ಆರ್ಸೆಲರ್ ಮಿತ್ತಲ್ ಎಂಬ ಹೆಸರಿನ, ಸ್ಟೀಲ್ ಕಂಪನಿಯನ್ನ ನಡೆಸುತ್ತಿದ್ದಾರೆ. ಅಲ್ಲದೇ ಅಮೇರಿಕದ ದೊಡ್ಡ ದೊಡ್ಡ ಕಂಪೆನಿಗಳ ಚೇರ್ಮೆನ್ ಆಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಆರನೇಯದಾಗಿ ಉದಯ್ ಕೋಟಕ್. ಇವರ ವಾಷಿಕ ಆದಾಯ, 1,650 ಕೋಟಿ ರೂಪಾಯಿಯಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಮಾಲೀಕರಾಗಿರುವ ಉದಯ್ ಕೋಟಕ್, ಇನ್ನು ಹಲವು ಉದ್ಯಮಗಳನ್ನು ಸಂಭಾಳಿಸುತ್ತಿದ್ದಾರೆ.
ಏಳನೇಯದಾಗಿ ಕುಮಾರ್ ಬಿರ್ಲಾ. ಇವರ ವಾರ್ಷಿಕ ಆದಾಯ, 1,570 ಕೋಟಿ ರೂಪಾಯಿಯಾಗಿದೆ. ಆದಿತ್ಯ ಬಿರ್ಲಾ ಕಂಪೆನಿಯ ಮಾಲೀಕರಾಗಿರುವ ಇವರು, ಸಿಮೆಂಟ್, ಕೆಮಿಕಲ್ಸ್, ಮೈನಿಂಗ್ ಮೆಟಲ್ಸ್, ರಿಟೇಲ್, ಸೇರಿ ಹಲವು ಉದ್ಯಮವನ್ನ ಸಂಭಾಳಿಸುತ್ತಿದ್ದಾರೆ.
ಎಂಟನೇಯದಾಗಿ ಸುನೀಲ್ ಮಿತ್ತಲ್. ಇವರ ವಾರ್ಷಿಕ ಆದಾಯ, 1,480 ಕೋಟಿ ರೂಪಾಯಿ. ಭಾರತಿ ಏರ್ಟೆಲ್ ಕಂಪನಿಯನ್ನ ಕಂಡು ಹಿಡಿದವರು ಇವರೇ. ಭಾರತದ ದೊಡ್ಡ ಟೆಲಿಕಾಮ್ ಕಂಪನಿಯಾಗಿರುವ ಏರ್ಟೆಲ್ ಮಾಲೀಕರಿವರು.
ಒಂಬತ್ತನೇಯವರು ದಿಲೀಪ್ ಸಾಂಘ್ವಿ. ಇವರ ವಾರ್ಷಿಕ ಆದಾಯ 1,370 ಕೋಟಿ ರೂಪಾಯಿಯಾಗಿದೆ. ಇವರು ಸನ್ ಫಾರ್ಮಾ ಕಂಪೆನಿಯ ಫೌಂಡರ್ ಆಗಿದ್ದಾರೆ. ಇವರ ಕಂಪನಿ ಭಾರತದ ಎರಡನೇಯ ಅತಿ ದೊಡ್ಡ ಫಾರ್ಮಸಿ ಕಂಪೆನಿಯಾಗಿದೆ. ಪ್ರಪಂಚದ ನೂರಕ್ಕೂ ಹೆಚ್ಚು ದೇಶಗಳಿಗೆ, ಇವರ ಕಂಪೆನಿ ಮೆಡಿಸಿನ್ ಸಪ್ಲೈ ಮಾಡುತ್ತದೆ.
ಹತ್ತನೇಯವರು ಸೈರಸ್ ಪೂನಾವಾಲಾ. ಇವರ ವಾರ್ಷಿಕ ಆದಾಯ, 1,270 ಕೋಟಿ ರೂಪಾಯಿಯಾಗಿದೆ. ಸೇರಮ್ ಇನ್ಸ್ಟಿಟ್ಯೂಟ್ ಆಫ್ ಕಂಪನಿಯ ಫೌಂಡರ್ ಆಗಿರುವ ಇವರು, ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದಾರೆ. ನಾವೆಲ್ಲ ತೆಗೆದುಕೊಳ್ಳುವ ಕೋವಿಶೀಲ್ಡ್ ವ್ಯಾಕ್ಸಿನ್ ಕಂಡು ಹಿಡಿದವರು, ಇವರ ಕಂಪನಿಯವರೇ.