Monday, December 23, 2024

Latest Posts

Release ಆಯ್ತು ಜೇಮ್ಸ್ ಚಿತ್ರದ ವಿಶೇಷ ಪೋಸ್ಟರ್, ಸೈನಿಕನಾಗಿ ಅಪ್ಪು ಸೂಪರ್.

- Advertisement -

ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ನಟಿಸಿರುವ ಜೇಮ್ಸ್ ಚಿತ್ರದ ವಿಷೇಶ ಪೋಸ್ಟರ್ ಇಂದು ಚಿತ್ರತಂಡ ಬಿಡುಗಡೆ ಮಾಡಿದ್ದು, ಅಭಿಮಾನಿಗಳ ಮನಗೆದ್ದಿದೆ. ಗಣರಾಜ್ಯೋತ್ಸವದ ದಿನವಾದ ಇಂದೇ ಅಪ್ಪು ಸೈನಿಕನ ಲುಕ್‌ನಲ್ಲಿರುವ ಪೋಸ್ಟರ್ ತೆರೆಕಂಡಿರುವುದು ಅಭಿಮಾನಿಗಳಿಗೆ ಕುಷಿತಂದು ಕೊಟ್ಟಿದೆ, ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್ ಎನ್ನುವ ಸಾಲುಗಳು ಗಮನಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪೋಸ್ಟರ್ ಶೇರ್ ಮಾಡುತ್ತಿದ್ದಾರೆ. ಈ ಲುಕ್ ನೋಡಿದ ಅಭಿಮಾನಿಗಳಲ್ಲಿ ಜೇಮ್ಸ್ ಚಿತ್ರದ ಮೇಲಿರುವ ನಿರೀಕ್ಷೆ ಹೆಚ್ಚುತ್ತಿದೆ. ಈ ಹಿಂದೆ ತೆರೆಕಂಡಿದ್ದ ಮೋಷನ್ ಪೋಸ್ಟರ್ ಮಿಲಿಯನ್ ಗಟ್ಟಲೆ ವೀವ್ಸ್ ಪಡೆದಿತ್ತು ಹಾಗೆಯೆ ಪೋಸ್ಟರ್‌ನಲ್ಲಿ ಕೇಳಿಬರುವ ಚಂದನ್ ಶೆಟ್ಟಿ ಹಾಡಿರುವ ಕೆಲಸಾಲುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜೇಮ್ಸ್ ಚಿತ್ರ ಮಾರ್ಚ 17 ರಂದು ತೆರೆಕಾಣುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು ಈಗಾಗಲೇ ಸ್ಯಾಂಡಲ್‌ವುಡ್ ಸಿನಿಮಾ ಹಂಚಿಕೆದಾರರು ಮಾರ್ಚ 17 ರಿಂದ 23ನೇ ತಾರಿಕಿನವರೆಗು ಯಾವುದೇ ಬೇರೆ ಚಿತ್ರಗಳನ್ನು ಬಿಡುಗಡೆ ಮಾಡುವುದಿಲ್ಲಾ ಎನ್ನುವಂತಹಾ ತೀರ್ಮಾನ ತೆಗೆದುಕೊಂಡಿದ್ದಾರೆ. ಪುನೀತ್ ಅವರಿಗೆ ಗೌರವ ಸೋಚಿಸುವುದ್ದಾಕ್ಕಾಗಿ ಈ ನಿರ್ದಾರ ತೆಗೆದುಕೊಳ್ಳಲಾಗಿದೆ.

ಜೇಮ್ಸ್,ಈ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಕಿಶೋರ್ ಪಾತಿಕೊಂಡ ನಿರ್ಮಾಣ ಮಾಡಿದ್ದಾರೆ. ಇನ್ನೂ ನಾಯಕಿಯಾಗಿ ಪ್ರಿಯಾ ಆನಂದ್ ಅಪ್ಪು ಜೊತೆ ಹೆಜ್ಜೆಹಾಕಿದ್ದಾರೆ. ವಿಲನ್ ಪಾತ್ರದಲ್ಲಿ ತೆಲುಗಿನ ಶ್ರೀಕಾಂತ್ ಕಾಣಿಸಿಕೊಂಡಿದ್ದಾರೆ, ಜೊತೆಗೆ ಅನು ಪ್ರಭಾಕರ್, ಅವಿನಾಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.

- Advertisement -

Latest Posts

Don't Miss