ದುಡ್ಡು ಇರುವವನಿಗೆ ಇರುವ ಬೆಲೆ, ಬಡವನಿಗೆ ಎಲ್ಲೂ ಸಿಗುವುದಿಲ್ಲ. ಸಂಬಂಧಿಕರು ಕೂಡ ಅವನನ್ನು ದೂರ ಮಾಡುತ್ತಾರೆ. ದುಡ್ಡಿನ ಬಗ್ಗೆ ಹಲವು ಮಾತುಗಳಿದೆ. ಕಾಸು ಇದ್ದವನೇ ಬಾಸು, ಕಾಸಿಲ್ಲಾ ಅಂದ್ರೆ ಅಂಥವನನ್ನು ನಾಯಿನೂ ಮೂಸೋದಿಲ್ಲಾ, ಹಣ ಕಂಡ್ರೆ ಹೆಣಾನೂ ಬಾಯಿ ಬಿಡತ್ತೆ, ಇತ್ಯಾದಿ ಮಾತುಗಳನ್ನ ನಾವು ಕೇಳಿರ್ತೀವಿ. ಯಾಕಂದ್ರೆ ಈ ಪ್ರಕಪಂಚದಲ್ಲಿ ಎಲ್ಲ ಕೆಲಸಕ್ಕೂ ದುಡ್ಡು ಅನ್ನೋದು ಅನಿವಾರ್ಯ. ದುಡ್ಡಿದ್ದರಷ್ಟೇ ನಾವು ಆಸೆ, ಆಕಾಂಕ್ಷೆಗಳನ್ನ ಪೂರೈಸಿಕೊಳ್ಳಬಹುದು. ಹಾಗಾದ್ರೆ ನೀವೂ ಶ್ರೀಮಂತರಾಗಬೇಕು ಅಂದ್ರೆ, ನಾವಿಂದು ಹೇಳುವ ರೂಲ್ಸ್ ಬಗ್ಗೆ ತಿಳಿಯಿರಿ. ಶ್ರೀಮಂತರು ಈ 7 ರೂಲ್ಸ್‌ನ್ನ ಫಾಲೋ ಮಾಡೋದಂತೆ. ಹಾಗಾದ್ರೆ ಯಾವುದು ಆ ರೂಲ್ಸ್ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಹಣ ಉಳಿತಾಯ ಮಾಡುವುದು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಬರೀ ಹಣ ಉಳಿತಾಯ ಮಾಡುವುದಷ್ಟೇ ಅಲ್ಲ. ನಿಮ್ಮ ಜೀವಿತಾವಧಿಯವರೆಗೂ ನಿಮಗೆ ಆದಾಯ ಬರುತ್ತಲೇ ಇರುವ ರೀತಿ, ನೀವು ಹಣ ಗಳಿಸಬೇಕು ಮತ್ತು ಉಳಿಸಬೇಕು.
ಎರಡನೇಯದಾಗಿ, ನೀವು ಬರೀ ನಿಮ್ಮ ಉದ್ಯೋಗ ಮಾಡಿಕೊಂಡಷ್ಟೇ ನಾನು ಶ್ರೀಮಂತನಾಗುತ್ತೇನೆ ಅಂತಾ ತಿಳಿಯೋದು ಭ್ರಮೆ. ಯಾಕಂದ್ರೆ ಉದ್ಯೋಗದಿಂದ ಬರುವ ಸಂಬಳ ಮನೆ ಖರ್ಚಿಗೆ ಸಾಕಾಗುತ್ತದೆ. ಉಳಿತಾಯ ಮಾಡಿದರೂ, ನಿಮ್ಮ ಜೀವಿತಾವಧಿ ತನಕ ಬರುವುದಿಲ್ಲ. ಆದ್ರೆ ನೀವು ಉದ್ಯೋಗದ ಜೊತೆ, ಸಣ್ಣ ಉದ್ಯಮವೂ ಶುರು ಮಾಡಿ, ಅದರಿಂದ ಹೆಚ್ಚೆಚ್ಚು ಲಾಭ ಬರುವ ಸಮಯದಲ್ಲಿ, ನೀವು ಉದ್ಯೋಗ ಬಿಟ್ಟು, ಉದ್ಯಮದ ಕಡೆ ಗಮನ ಕೊಟ್ಟರೂ, ಅದನ್ನ ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಬಹುದು. ಮತ್ತು ಉತ್ತಮ ಆದಾಯ ಬರಬಹುದು.
ಮೂರನೇಯದಾಗಿ ಜಾಣತನ. ಉದ್ಯೋಗ ಆರಂಭಿಸಿದ ಮೇಲೆ ಆದಾಯ ಸುಮ್ಮನೆ ಬರುವುದಿಲ್ಲ. ಅದಕ್ಕಾಗಿ ನೀವು ನಿಮ್ಮ ಬುದ್ಧಿ ಓಡಿಸಬೇಕಾಗುತ್ತದೆ. ಜಾಣತನ ತೋರಿಸಬೇಕಾಗುತ್ತದೆ. ಉದಾಹರಣೆಗೆ, ಕೆಲ ಕಾರ್ಯಕ್ರಮಕ್ಕೆ ಬರುವ ಭಾಷಣಕಾರರು, ಹಾಸ್ಯ ಕಲಾವಿದರು, ಹಾಡುಗಾರರು, ನೃತ್ಯಪಟುಗಳು, ಒಮ್ಮೆ ಕಾರ್ಯಕ್ರಮ ಕೊಡಲು ಕೋಟಿ ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಯಾಕಂದ್ರೆ ಅವರಲ್ಲಿ, ಅಷ್ಟು ಟ್ಯಾಲೆಂಟ್ ಇರುತ್ತದೆ. ಅದನ್ನು ಪಡೆಯಲು ಅವರು ಅಷ್ಟೇ ಕಷ್ಟಪಟ್ಟಿರುತ್ತಾರೆ.
ನಾಲ್ಕನೇಯದಾಗಿ ಕಲಿಕೆ. ನನಗೆ ಎಲ್ಲವೂ ಗೊತ್ತು. ನಾನೇ ಜಾಣ. ನನಗಿನ್ನೇನು ಕಲಿಯುವುದು ಬಾಕಿ ಉಳಿದಿಲ್ಲ ಎನ್ನುವವರು ಜೀವನದಲ್ಲೆಂದು ಮುಂದೆ ಬರುವುದಿಲ್ಲ. ಅವರು, ನಿಂತ ನೀರಾಗಿರುತ್ತಾರೆ. ಅವರಿಗೆ ತಾನೇ ಜಾಣ ಎಂಬ ಅಹಂ ಇರುತ್ತದೆ. ಅದೇ ನಾನಿನ್ನೂ ಕಲಿಯುವುದು ತುಂಬ ಇದೆ. ಪ್ರತಿದಿನ ಹೊಸತೇನಾದರೂ ಕಲಿಯುವುದೇ ನನ್ನ ಗುರಿ ಅಂತಾ ಹೇಳುವವರು, ಅದನ್ನು ಕಲಿತು, ಜೀವನದಲ್ಲಿ ಅಳವಡಿಸಿಕೊಳ್ಳುವರು ಉದ್ಧಾರವಾಗುತ್ತಾರೆ.
ಐದನೇಯದಾಗಿ ಸಮಯ ವ್ಯರ್ಥ ಮಾಡುವುದು. ನೀವು ಏನನ್ನಾದರೂ ಮಾಡಬೇಕು, ಹೊಸ ಉದ್ಯಮ ಶುರು ಮಾಡಬೇಕು, ಹೊಸ ಕೆಲಸ ಶುರು ಮಾಡಬೇಕು ಅಂತಾ ಅಂದುಕೊಂಡಿದ್ದಲ್ಲಿ, ಸರಿಯಾದ ಮುಹೂರ್ತ ಬರಲಿ, ಇಂದು- ನಾಳೆ ಎಂದು ಕೂರಬಾರದು. ಬದಲಾಗಿ ಯೋಚಿಸಿದ ಕೆಲ ದಿನಗಳಲ್ಲೇ ಅದನ್ನ ಶುರು ಮಾಡಿ ಬಿಡಿ. ಇಲ್ಲದಿದ್ದಲ್ಲಿ, ಛೇ ಇದನ್ನ ನಾನು ಮೊದಲೇ ಶುರು ಮಾಡಿದ್ದರೆ, ಎಷ್ಟು ಚೆನ್ನಾಗಿರೋದು ಅಂತಾ ನಿಮಗೂ ಅನ್ನಿಸುತ್ತೆ.
ಆರನೇಯದಾಗಿ ಖರ್ಚು ವೆಚ್ಚ ಲೆಕ್ಕ ಹಾಕೋದು. ಮೊದಲೆಲ್ಲ ಇದೇ ರೀತಿ, ಲೆಕ್ಕ ಇಟ್ಟು ದುಡ್ಡನ್ನ ಮಿತವಾಗಿ ಖರ್ಚು ಮಾಡುತ್ತಿದ್ದರು. ಆದ್ರೆ ಈಗಿನ ಕಾಲದಲ್ಲಿ ಲೆಕ್ಕ ಹಾಕಿದ್ರೆ, ಅಂಥವರನ್ನು ದಡ್ಡರೆಂದು ಹಂಗಿಸುತ್ತಾರೆ. ನಿಜ ಸಂಗತಿ ಅಂದ್ರೆ, ಹಾಗೆ ಲೆಕ್ಕ ಹಾಕಿ, ಅವಶ್ಯಕತೆ ಇದ್ದರಷ್ಟೇ ಹಣ ಖರ್ಚು ಮಾಡುವವನು ಜಾಣ.
ಏಳನೇಯದಾಗಿ, ದುಡ್ಡಿದ್ದರೂ ಬಡವನಾಗಿರೋದು. ಹೌದು, ನಿಮ್ಮ ಬಳಿ ಸ್ವಲ್ಪ ದುಡ್ಡು ಬಂತು, ಲಾಭ ಬಂತು ಎಂದಾಕ್ಷಣ, ಅದರಿಂದ ಶಾಪಿಂಗ್ ಮಾಡುವುದು, ಬೇಕಾದ ವಸ್ತುಗಳನ್ನ ತೆಗೆದುಕೊಳ್ಳುವುದು ತಪ್ಪು. ಬದಲಾಗಿ, ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಳ್ಳಲು ಕಲಿಯಬೇಕು. ನೀವು ಶ್ರೀಮಂತರಾಗಿದ್ದೀರಿ, ನಿಮಗೆ ಬೇಕಾದಷ್ಟು ಹಣವನ್ನು ಗಳಿಸಿದ್ದೀರಿ ಎಂದಾದಲ್ಲಿ ಮಾತ್ರ, ಶ್ರೀಮಮಂತಿಕೆಯ ಜೀವನ ಬಾಳಿ. ಅಲ್ಲಿಯವರೆಗೂ ಬಡವರಾಗಿರಿ.
ನಿಜವಾದ ಶ್ರೀಮಂತರು ಫಾಲೋ ಮಾಡುವ ರೂಲ್ಸ್ ಅಂದ್ರೆ ಈ ಏಳನೇ ರೂಲ್ಸ್. ಶ್ರೀಮಂತರಾಗಲು ನಾವು ಕಷ್ಟಪಡಬೇಕೇ ಹೊರತು, ಶ್ರೀಮಂತರಂತೆ ಕಾಣಲು ಅಲ್ಲ.