ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್ ನದಿಗೆ ಕಾರು ಬಿದ್ದಿದ್ದು, ಕಾರಿನಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಉಜ್ಜಯಿನಿಯಲ್ಲಿ ನಡೆಯುತ್ತಿದ್ದ ಮದುವೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ನಿಧನರಾದವರು ವರ ಕಡೆಯವರಾಗಿದ್ದು, ಬೆಳಿಗ್ಗೆ 5.30ಕ್ಕೆ ಮದುವೆಗೆ ಹೊರಟಿದ್ದರು. ಆದ್ರೆ ಮಾರ್ಗ ಮಧ್ಯೆ ಕಾರು ನಿಯಂತ್ರಣ ತಪ್ಪಿ, ನದಿಗೆ ಬಿದ್ದಿದೆ. ಪೊಲೀಸರು ಕಾರು ಚಾಲಕ ಮದ್ಯಪಾನ ಮಾಡಿರಬಹುದೆಂದು ಶಂಕಿಸಿದ್ದಾರೆ.
ಇನ್ನು ಕ್ರೇನ್ ಮೂಲಕ ನದಿಗೆ ಬಿದದ್ದ ಕಾರ್ ಮತ್ತು 9 ಜನರ ಶವವನ್ನು ಹೊರತೆಗೆಯಲಾಗಿದ್ದು, ನದಿಯಲ್ಲಿ ಮತ್ತೆ ಮೃತದೇಹ ಇದೆಯಾ ಎಂದು ಕಾರ್ಯಾಚರಣೆ ನಡೆಸಲಾಯಿತು. ಆದ್ರೆ ಯಾರದ್ದೂ ಮೃತದೇಹ ಸಿಗದ ಕಾರಣ ಕಾರ್ಯಾಚರಣ ಸ್ಥಗಿತಗೊಳಿಸಲಾಗಿದೆ. ಇನ್ನು ಮೃತದೇಹಗಳನ್ನು ಸ್ಥಳೀಯ ಎಂಬಿಎಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಈ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಸಂತಾಪ ವ್ಯಕ್ತಪಡಿಸಿದ್ದು, ಇದೊಂದು ದುರದೃಷ್ಟಕರ ಘಟನೆ, ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಕುಟುಂಬಸ್ಥರಿಗೆ ಬೇಕಾದ ಎಲ್ಲಾ ಸೌಲಭ್ಯವನ್ನೂ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.




