ಶಿವಮೊಗ್ಗ: ನನಗೆ ಯಡಿಯೂರಪ್ಪ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ. ರಾಜಕೀಯದಲ್ಲಿ ಯಡಿಯೂರಪ್ಪನವರು ನನ್ನನ್ನು ಬೆಳೆಸಿದ್ದಾರೆ. ಬಿ.ಎಸ್.ಯಡಿಯೂರಪ್ಪ(B.S. Yediyurappa) ದೂರದೃಷ್ಟಿಯಿರುವಂತಹ ನಾಯಕ. ಬಡವರ ಬಗ್ಗೆ ಅಪಾರ ಕಳಕಳಿ ಇರುವಂತಹ ವ್ಯಕ್ತಿ ಬಿ ಎಸ್ ವೈ ಶಿಕಾರಿಪುರದಲ್ಲಿ ಸೂರ್ಯನಿಗೆ ದೀಪ ಹಿಡಿದಂಗೆ. ರಾಜ್ಯದ ಮೂಲೆಮೂಲೆಯಲ್ಲೂ ಬಿ ಎಸ್ ವೈ ಸೇವೆ ಸಲ್ಲಿಸಿದ್ದಾರೆ. ರಾಜಕೀಯವಾಗಿ ಬೆಳೆಯಲು, ಸಿಎಂ(CM) ಆಗಲು ಬಿಎಸ್ವೈ ಕಾರಣ. ಸಿಎಂ ಸ್ಥಾನ ಬಿಟ್ಟಾಗ ಬಿ ಎಸ್ ವೈ ಎಲ್ಲಿಯೂ ಕಹಿ ಇರಲಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಾಗಿರುವೆ ಎಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆ ನೀಡಿದ್ದಾರೆ. ವಿವಿಧ ವಿಚಾರಗಳ ಚರ್ಚೆಗಾಗಿ ನಡೆಯಲಿರುವ ಜಲಜೀವನ್ ಮಿಷನ್ (Water Resources Mission) ಸಭೆಯಲ್ಲಿ ನಾನೂ ಭಾಗವಹಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪಾದಯಾತ್ರೆ ಮಾಡಿದ್ದಕ್ಕೆ ಮೇಕೆದಾಟು ಯೋಜನೆಗೆ ₹ 1000 ಕೋಟಿ ಅನುದಾನ ಕೊಟ್ಟರು ಎಂಬ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ವಿಧಾನಸಭೆಯಲ್ಲೇ ತಕ್ಕ ಉತ್ತರ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಕಿಯಲ್ಲಿ ಅರಳಿದ ನಾಯಕ ಬಿ ಎಸ್ ವೈ ಆಗಿದ್ದಾರೆ. ಪರಿಶ್ರಮ, ಬೆವರು ಸುರಿಸಿ ಬಿ ಎಸ್ ವೈ ರೈತರ ಪರ ಹೋರಾಟ ಮಾಡಿದ್ದಾರೆ. ಬೊಮ್ಮಾಯಿ ಅತ್ಯುತ್ತಮ ಬಜೆಟ್ ನೀಡಿದ್ದಾರೆ. ನೀರಾವರಿಗೆ ಬೊಮ್ಮಾಯಿ ಹೆಚ್ಚು ಒತ್ತು ನೀಡಿದ್ದಾರೆ ಎಂದು ಶಿಕಾರಿಪುರದ ಪಟ್ಟಣದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.




