ಬೆಂಗಳೂರು: ಜೇಮ್ಸ್ ಚಿತ್ರಕ್ಕೆ ಯಾವುದೇ ಅಡ್ಡಿ- ಆತಂಕವಿಲ್ಲ. ರಾಜ್ಯ ಸರ್ಕಾರ ಚಿತ್ರತಂಡದ ಜೊತೆಗೆ ಬೆಂಬಲಕ್ಕಿದೆ. ಫಿಲ್ಮಂ ಚೇಂಬರ್ ಅಧ್ಯಕ್ಷರ ಜೊತೆಗೂ ಮಾತನಾಡಿದ್ದೇನೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅಭಯ ನೀಡಿದ್ದಾರೆ.
ಇಂದು ಜೇಮ್ಸ್ ಚಿತ್ರ ಪ್ರದರ್ಶನದ ಕುರಿತ ಗೊಂದಲದ ಬಗ್ಗೆ ಸಿಎಂ ಬೊಮ್ಮಾಯಿಯವರನ್ನು, ನಟ ಶಿವಕುಮಾರ್ ಹಾಗೂ ಗೀತಾ ಶಿವಕುಮಾರ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹಾಗೂ ನಿರ್ಮಾಪಕ ಶ್ರೀಕಾಂತ್ ಭೇಟಿಯಾಗಿ ಚರ್ಚೆ ನಡೆಸಿದರು.
ಈ ಬಳಿಕ ಮಾತನಾಡಿದಂತ ಸಿಎಂ ಬಸವರಾಜ ಬೊಮ್ಮಾಯಿಯವರು, ಕರ್ನಾಟಕದ ಮೇರು ನಟ ಶಿವರಾಜ್ ಕುಮಾರ್ ಆಗಮಿಸಿದ್ರು. ಶಕ್ತಿಧಾಮದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿದ್ದರು. ಮುಂದಿನ ತಿಂಗಳು ವಿವಿಧ ಕಾಮಗಾರಿಗಳು ಶಕ್ತಿ ಧಾಮದಲ್ಲಿ ನೆರವೇರಲಿವೆ ಎಂದರು.
ಜೇಮ್ಸ್ ನಿರ್ಮಾಪಕರಿಗೆ ಹೇಳಿದ್ದೇವೆ, ಪಿಲಂ ಚೇಂಬರ್ ಜೊತೆ ಮಾತಾಡಿ ಎಂದು ಹೇಳಿದ್ದೇವೆ. ನಿರ್ಮಾಪಕರ ಜೊತೆ ಮತ್ತೆ ಮಾತಾಡ್ತೇವೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕರಾವಳಿ ಭಾಗದ ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ಮುಗ್ಗಟ್ಟುಗಳಿಗೆ ನಿಷೇಧ ವಿಚಾರದ ಪ್ರಶ್ನೆಗೆ ಉತ್ತರಿಸಲು ಸಿಎಂ ಬೊಮ್ಮಾಯಿ ನಕಾರ ವ್ಯಕ್ತ ಪಡಿಸಿದರು.




