ಬೆಂಗಳೂರು: 2022ನೇ ಸಾಲಿನ ಧನವಿನಿಯೋಗ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಪೂರಕ ಅಂದಾಜುಗಳ ಮೂರನೇ ಹಾಗೂ ಅಂತಿಮ ಕಂತುಗಳ ಬೇಡಿಕೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಇಂದು ವಿಧಾನಸಭೆಯಲ್ಲಿ, ಪೂರಕ ಅಂದಾಜುಗಳ ಕುರಿತ ಚರ್ಚೆಗೆ ಉತ್ತರಿಸಿದಂತ ಸಿಎಂ ಬಸವರಾಜ್ ಬೊಮ್ಮಾಯಿ, ಒಟ್ಟು ಆದಾಯದಲ್ಲಿ ನಾವು ಹೆಚ್ಚಳ ತಂದಿದ್ದೇವೆ, 5584 ಕೋಟಿ ಆದಾಯ ತೆರಿಗೆಯಲ್ಲಿ ಹೆಚ್ಚಳವಾಗಿದೆ, ಬಹುತೇಕವಾಗಿ ಇತ್ತೀಚಿನ ದಿನಗಳಲ್ಲಿ ಟಾರ್ಗೆಟ್ ಗಿಂತ ಹೆಚ್ಚು ಇಷ್ಟು ದೊಡ್ಡ ಪ್ರಮಾಣದ ವಾಣಿಜ್ಯ ತೆರಿಗೆ ಸಂಗ್ರಹ ಮಾಡಿದ್ದು ದಾಖಲೆ ಎಂದರು.
ಅದು ಯಾವ ಹಿನ್ನೆಲೆಯಲ್ಲಿ ನೋಡಬೇಕು ಅಂದ್ರೆ ಮೊದಲೇ ಈ ವರ್ಷದ ಆರು ತಿಂಗಳು ಕೋವಿಡ್ ಇತ್ತು, ಕಡಿಮೆ ವಾಣಿಜ್ಯ ತೆರಿಗೆ ಸಂಗ್ರಹ ಕಡಿಮೆ ಆಗಿತ್ತು, ಸೆಪ್ಟೆಂಬರ್ ತಿಂಗಳಿಂದ ಹೆಚ್ಚಳವಾಗಿದೆ. ಈ ಬಾರಿ ಅರ್ಧ ವರ್ಷ ಸಂಗ್ರಹ ಆಗಿಲ್ಲ ಎಂದರೂ ಕೂಡ ಇನ್ನೂ ಅರ್ಧ ವರ್ಷ ದಲ್ಲಿ ಸಂಗ್ರಹ ಮಾಡಿದ್ದೇವೆ ಎಂದರು.
ಅಬಕಾರಿಯಲ್ಲಿ 24 ಸಾವಿರ 580 ಕೋಟಿ ರೂಪಾಯಿ ಬಜೆಟ್ ಅಂದಾಜು ಇತ್ತು, 25 ಸಾವಿರ 597 ಕೋಟಿ ರೂಪಾಯಿ ಸಂಗ್ರಹ ಮಾಡಿದ್ದೇವೆ, 1 ಸಾವಿರ 396 ಕೋಟಿ ಅಬಕಾರಿಯಲ್ಲಿ ಹೆಚ್ಚಳ ಮಾಡಿದ್ದೇವೆ. ಕೃಷ್ಣ ಭೈರೇಗೌಡ ಪೂರಕ ಅಂದಾಜಿನಲ್ಲಿ 1% ರಷ್ಟು ಮಾತ್ರ ಗ್ರೋತ್ ಆಗುತ್ತೆ ಎಂದು ಹೇಳಿದ್ರು. ಇದೆ ವರ್ಷ ನಾವು ತೋರಿಸಿದ್ದೇವೆ 1% ಕ್ಕಿಂತ ಹೆಚ್ಚು ಗ್ರೋತ್ ಆಗುತ್ತದೆ ಅಂತ. 1% ಇಸ್ ಆ ವಾಲಿಮ್ ಅಂತ ಅದು. ಟ್ಯಾಕ್ಸ್ ಸೋರಿಕೆ ತಡೆದರೆ, ಕೋವಿಡ್ ಸಂದರ್ಭದಲ್ಲಿ ಕೂಡ ಟ್ಯಾಕ್ಸ್ ಸಂಗ್ರಹ ಮಾಡಿದ್ದೇವೆ. ನಾವು ತೆರಿಗೆ ಸೋರಿಕೆ ಮಾತ್ರ ತಡೆದಿದ್ದೇವೆ ಅಷ್ಟೇ, ಅದಕ್ಕೆ ಇಷ್ಟು ಹೆಚ್ಚಳವಾಗಿದೆ. ಮುದ್ರಾಂಕವು ಕೂಡ 600 ಕೋಟಿ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು.




