ಬೆಂಗಳೂರು: ನನ್ನ ಮಗಳು ಯಾವುದೇ ಎಸ್ಸಿ ಜಾತಿ ಪ್ರಮಾಣ ಪತ್ರವನ್ನು ಪಡೆದಿಲ್ಲ. ಹೈಸ್ಕೂಲ್ ಓದುತ್ತಿದ್ದಾಗ ಪಡೆದಿದ್ದಂತ ಜಾತಿ ಪ್ರಮಾಣ ಪತ್ರ ಮಾತ್ರವೇ ಆಗಿದೆ. ಹೀಗೆ ಪಡೆದಿದ್ದಾಳೆ ಎಂಬುದಾಗಿ ಸುಖಾ ಸಮುಮ್ಮನೆ ಆರೋಪಿಸಿದ್ರೇ ಸರಿ ಇರೋದಿಲ್ಲ. ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂಬುದಾಗಿ ಶಾಸಕ ಎಂ.ಪಿ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ರಾಜಕೀಯದ ಬಗ್ಗೆ ಏನಾದ್ರೂ ಮಾತನಾಡಿ. ಅದನ್ನು ಬಿಟ್ಟು, ನನ್ನ ಮಗಳ ಸುದ್ದಿಗೆ ಬಂದ್ರೆ ಸುಮ್ಮನೇ ಇರೋದಿಲ್ಲ. ಸುಳ್ಳು ಆರೋಪ ಮಾಡೋದನ್ನು ಸಹಿಸೋದಿಲ್ಲ. ನಾನು ಯಾವುದೇ ಜಾತಿ ಪ್ರಮಾಣ ಪತ್ರ ಪಡೆದಿಲ್ಲ. ಸುಖಾ ಸುಮ್ಮನೆ ಆರೋಪಿಸಿದ್ರೇ, ಅವರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸೋದಾಗಿ ಎಚ್ಚರಿಸಿದರು.
ಬುಟ್ಟಿಯಲ್ಲಿ ಹಾವು ಇದೆ, ಹಾವು ಇದೆ ಅಂತ ಬುರುಡೆ ಬಿಡೋದಲ್ಲ. ಬುಟ್ಟಿಯಲ್ಲಿ ಹಾವೋ, ಖಾಲಿ ಬುಟ್ಟಿಯೋ ಇರೋದು ಓಪನ್ ಮಾಡಿ ತೋರಿಸಿ. ನಾವು ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ನಿಮ್ಮ ಬಳಿ ದಾಖಲೆ ಇದ್ದರೇ ಬಿಡುಗಡೆ ಮಾಡಿ. ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಈ ಬಗ್ಗೆ ಸಿಎಂ, ಗೃಹ ಸಚಿವರೂ ಪರಿಶೀಲನೆ ಮಾಡಲಿ ಎಂಬುದಾಗಿ ಹೇಳಿದರು.




