‘ಚಿತ್ರಕಲಾ ಸಂತೆ’ಯಲ್ಲಿ, ‘ರಿಲ್ಯಾಕ್ಸ್ ಮೂಡ್’ನಲ್ಲಿ ‘ಐಸ್ ಕ್ಯಾಂಡಿ ಸವಿದು’ ಗಮನ ಸೆಳೆದ ‘ಸಿಎಂ ಬೊಮ್ಮಾಯಿ’

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರದ ಇಂದು ಇಂದಿನ ಚಿತ್ರಕಲಾ ಸಂತೆಯಲ್ಲಿ, ರಿಲ್ಯಾಕ್ಸ್ ಮೂಡ್ ನಲ್ಲಿ ಐಸ್ ಕ್ಯಾಂಡಿ ಸವಿದು ಗಮನ ಸೆಳೆದರು.

ಕುಮಾರಪಾರ್ಕ್ ನಲ್ಲಿನ ಚಿತ್ರಕಲಾ ಪರಿಷತ್ ಸಂತೆಯಲ್ಲಿ, ಭಾಗವಹಿಸಿದಂತ ಅವರು, ಚಿತ್ರಸಂತೆಗೆ ಚಾಲನೆ ನೀಡಿ, ಒಂದು ರೌಂಡ್ ಚಿತ್ರಕಲಾ ಸಂತೆಯಲ್ಲಿ ಓಡಾಡಿದರು.

ಚಿತ್ರಕಲಾ ಸಂತೆಯಲ್ಲಿ ಐಸ್ ಕ್ಯಾಂಡಿ ಮಾರಾಟ ಮಾಡುತ್ತಿದ್ದಂತ ಹುಡುಗನನ್ನು ಕಂಡ ಅವರು, ತಮ್ಮ ಇಷ್ಟದ ಮ್ಯಾಂಗೋ ಐಸ್ ಕ್ಯಾಂಡಿಯನ್ನು ಖರೀದಿಸಿ, ಜೊತೆಗಿದ್ದವರಿಗೂ ಕೊಡಿಸಿ, ರುಚಿಯನ್ನು ಹೀರುತ್ತಾ ಸುತ್ತಾಡಿದರು.

ಇದೇ ವೇಳೆ ಐಸ್ ಕ್ಯಾಂಡಿ ಸವಿದು ತಮ್ಮ ಹಳೆಯ ನೆನಪು ಮೆಲುಕು ಹಾಕಿದಂತ ಅವರು, ತಾವು ಶಾಲಾ ದಿನಗಳಲ್ಲಿ ಹೀಗೆ ಐಸ್ ಕ್ಯಾಂಡಿ ಸವಿದಿದ್ದೆ. ಮತ್ತೆ ಸವಿಯುವಂತ ದಿನ ಇಂದು ಬಂದಿದೆ ಎಂಬುದಾಗಿ ನನೆಪು ಮಾಡಿಕೊಂಡರು.

About The Author