ಬಿಸಿಲು ಲೆಕ್ಕಿಸದೆ ದೇವರನ್ನು ನೋಡಲು ಹೊರಟ ಜನರು: ನೂರಾರು ಕಿಲೋ ಮೀಟರ್ ಪಾದಯಾತ್ರೆ

ರಾಯಚೂರು : ಆ ಜನರ ಬಿಸಿಲು ಲೆಕ್ಕಿಸದೆ ದೇವರನ್ನು ನೋಡಲು ಹೊರಟ್ಟಿದ್ದಾರೆ. ಮೈಸುಡುವ ಬಿಸಿಲು,ಕಗ್ಗತ್ತಲು ಅನ್ನೋದನ್ನು ಲೆಕ್ಕಿಸದೇ ಆ ಭಕ್ತರ ದಂಡು, ಹೊಸ ರಥದೊಂದಿಗೆ ಆಂದ್ರದ ಶ್ರೀಶೈಲಕ್ಕೆ ನೂರಾರು ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ.

ಹೌದು..ಹೀಗೆ ಗಂಟೆ ನಾದ,ರಥದ ಜೊತೆಜೊತೆಯಲ್ಲಿ ಸಾಗ್ತಿರೊ ಇವ್ರೆಲ್ಲಾ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಮುಳಸಾವಳಗಿ ಗ್ರಾಮಸ್ಥರು. ಈ ಮುಳಸಾವಳಗಿ ಗ್ರಾಮದ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನೂತನವಾಗಿ ರಥವನ್ನು ನಿರ್ಮಿಸಲಾಗಿದೆ. ಆ ರಥವನ್ನು ಆಂದ್ರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗ್ತಿದೆ. ಆ ರಥದೊಂದಿಗೆ ನೂರಾರು ಭಕ್ತರು ಪಾದಯಾತ್ರೆ ಮೂಲಕ ಸುಮಾರು 550 ಕಿಮಿ ದೂರದಲ್ಲಿರೊ ಶ್ರೀಶೈಲಕ್ಕೆ ಹೊರಟಿದ್ದಾರೆ. ಶ್ರೀಶೈಲಕ್ಕೆ ಹೊರಟಿರೊ ಪಾದಯಾತ್ರೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ನಿತ್ಯ ಭಜನೆ, ಕಂಬಿಹಾಡುಗಳು, ಮಂಗಳಾರತಿ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಗ್ತಿದೆ. ಪಾದಯಾತ್ರೆಯಲ್ಲಿ ಮಹಿಳೆಯರು ಸೇರಿ ನೂರಾರು ಭಕ್ತರ ದಂಡು ಓಂನಮಃ ಶಿವಾಯ ಅನ್ನೊ ವೇದವಾಖ್ಯದ ಮೂಲಕ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಹೀಗೆ ಹೊರಟಿರೊ ಪಾದಯಾತ್ರೆ ಸದ್ಯ ರಾಯಚೂರು ಜಿಲ್ಲೆ ತಪುಲಿದೆ..ಮಲ್ಲಿಕಾರ್ಜುನ ಸ್ವಾಮಿಯ ರಥ,ಭಜನೆ ಶಬ್ಧ ಕೇಳಿ ಮಾರ್ಗ ಮಧ್ಯದ ಊರುಗಳ ಗ್ರಾಮಸ್ಥರು, ಈ ಭಕ್ತರನ್ನು ಪೋಷಿಸುತ್ತಿದ್ದಾರೆ. ಊಟ-ಉಪಹಾರ, ತಂಗಲು ಆಶ್ರಯ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಹಲವರು ಈ ರಥಕ್ಕೆ ಕೈಮುಗಿದು,ತಮ್ಮ ಕೈಲಾದಷ್ಟು ದೇಣಿಗೆಯನ್ನು ದೇವರಿಗೆ ಅರ್ಪಿಸುತ್ತಿದ್ದಾರೆ. ಜೊತೆಗೆ ತಮ್ಮೂರ ಗಡಿ ದಾಟೊ ವರೆಗೂ ಗ್ರಾಮಸ್ಥರು ಈ ಭಕ್ತರ ಜೊತೆ ಪದಾಯಾತ್ರೆಯಲ್ಲಿ ಪಾಲ್ಗೊಂಡು, ಊರು ಗಡಿ ದಾಟಿಸಿ ಬಿಳ್ಕೊಡುತ್ತಿದ್ದಾರೆ. ಇದೇ ಮಾರ್ಚ್ 28 ಕ್ಕೆ ಈ ಪಾದಯಾತ್ರೆ ಶ್ರೀಶೈಲ ತಲುಪೊ ನಿರೀಕ್ಷೆಯಿದೆ. ಶ್ರೀಶೈಲ ಮುಟ್ಟಿದ ಬಳಿಕ ಅಲ್ಲಿ, ಪಾತಾಳ ಗಂಗೆಯಲ್ಲಿ ರಥಕ್ಕೆ ಅಭಿಷೇಕ, ಪೂಜೆಗಳನ್ನು ಮಾಡಿಸಲಾಗುತ್ತೆ. ಬಳಿಕ ಅಲ್ಲಿನ ಜಗದ್ಗುರುಗಳ ಆಶಿರ್ವಾದ ಪಡೆಯೋ ಕಾರ್ಯಕ್ರಮವಿದೆ. ಇದೆಲ್ಲಾ ಪೂಜಾ ಕೈಂಕರ್ಯಗಳು ಮುಗಿದ ಬಳಿಕ ರಥವನ್ನು ಮತ್ತೆ ತಮ್ಮೂರು ಮುಳಸಾವಳಗಿಗೆ ತೆಗೆದುಕೊಂಡು ಹೋಗಲಾಗುತ್ತೆ. ಬಳಿಕ ಇದೇ ಏಪ್ರಿಲ್ 21 ಕ್ಕೆ ದವಣದ ಹುಣ್ಣಿಮೆಯಂದು ನಡೆಯಲಿರೊ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆಯಲ್ಲಿ ಇದೇ ರಥದ ಮೂಲಕ ವಿಜೃಂಭನೆಯಿಂದ ರಥೋತ್ಸವ ನಡೆಯಲಿದೆ..

ಶ್ರೀಶೈಲ ಮಲ್ಲಿಕಾರ್ಜುನನ ದರ್ಶನದ ನಂತರ ಮರಳಿ ಬರಲು ರಥಕ್ಕೆ ಟ್ರ್ಯಾಕ್ಟರ್, ಜನಕ್ಕೆ ವಾಹನ, ದವಸ ಧಾನ್ಯಗಳಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದೆ. ಅದೇನೆ ಇರಲಿ, ಬರೀ ಫೋನು,ಡಿಜಿಟಲ್ ಅನ್ನೊ ಈ ಕಾಲದಲ್ಲಿ, ಪಲ್ಲಕ್ಕಿಯೊಂದಿಗಿನ ಭಜನೆ, ಕಂಬಿಹಾಡುಗಳು, ಮಂಗಳಾರತಿ, ಧಾರ್ಮಿಕ ವಿಧಿ ವಿಧಾನಗಳನ್ನು ಕಂಡು ಜನ ಪುನೀತರಾಗಿದ್ದಂತು ಸುಳ್ಳಳ್ಳ..

ವರದಿ: ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು

About The Author