ಇಂದು SSLC ಪರೀಕ್ಷೆ ಬರೆದವರು, ಗೈರು ಹಾಜರಾದವರು ಎಷ್ಟು ಗೊತ್ತಾ.?

ಬೆಂಗಳೂರು: 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಇಂದು ರಾಜ್ಯಾಧ್ಯಂತ 3,444 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಪ್ರಥಮ ಭಾಷೆಯ ವಿಷೆಯವನ್ನು ಇಂದು ಮೊದಲ ದಿನವೇ ಬರೆದಂತ ವಿದ್ಯಾರ್ಥಿಗಳು ಎಷ್ಟು ಎನ್ನುವ ಅಂಕಿ ಅಂಶದ ಮಾಹಿತಿ ಮುಂದಿದೆ.

ಇಂದಿನಿಂದ ಆರಂಭಗೊಂಡಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳು 8,69,399 ಆಗಿದೆ. ಈ ದಿನ ಪರೀಕ್ಷೆಗೆ ಹಾಜರಾದದ್ದು 8,48,405 ವಿದ್ಯಾರ್ಥಿಗಳು. ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 20,994 ಆಗಿದೆ.

ಮೊದಲಬಾರಿಗೆ ಪರೀಕ್ಷೆಗೆ ಹಾಜರಾದ ಶಾಲಾ ವಿದ್ಯಾರ್ಥಿಗಳ ಸಂಖ್ಯೆ 8,11,195 ಆಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ಪುನರಾವರ್ತಿತ ಅಭ್ಯರ್ಥಿಗಳ ಸಂಖ್ಯೆ 1,701 ಆಗಿದೆ. ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದ ಖಾಸಗಿ ಅಭ್ಯರ್ಥಿಗಳ ಸಂಖ್ಯೆ 35,509 ಆಗಿದೆ.

About The Author