ಇಂದು ಮಂಡಿಸಬೇಕಿದ್ದಂತ ಬಿಬಿಎಂಪಿ ಬಜೆಟ್, ತಾತ್ಕಾಲಿಕವಾಗಿ ಮುಂದೂಡಿಕೆ

ಬೆಂಗಳೂರು: ಪೂರ್ವ ಚರ್ಚೆ ಇಲ್ಲದೇ ಏಕಾಏಕಿ ಬಜೆಟ್ ಮಂಡನೆಗೆ ಅನುಮತಿ ಪಡೆಯಲು ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳು, ಈಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ 3ಕ್ಕೆ ಮಂಡನೆಯಾಗಬೇಕಿದ್ದಂತ ಬಿಬಿಎಂಪಿ ಬಜೆಟ್ ಮುಂದೂಡಿಕೆಯಾಗಿದೆ.

ಇಂದು ಮಧ್ಯಾಹ್ನ 3ಕ್ಕೆ ಬಿಬಿಎಂಪಿಯಿಂದ 2021-22ನೇ ಸಾಲಿನ ಬಜೆಟ್ ಮಂಡನೆಗಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದ್ರೇ.. ಬಜೆಟ್ ನಲ್ಲಿ ಕೆಲ ಬದಲಾವಣೆಗಳು ಮಾಡಬೇಕಾದ ಕಾರಣ, ಇಂದು ಮಂಡಿಸಬೇಕಿದ್ದಂತ ಬಿಬಿಎಂಪಿ ಬಜೆಟ್ ಅನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಜೆಟ್ ಮಂಡನೆಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೇ ಅಧಿವೇಶನ ಇರುವುದರಿಂದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಂದು ಮಂಡಿಸಬೇಕಿದ್ದಂತ ಬಿಬಿಎಂಪಿ ಬಜೆಟ್ ಮಂಡನೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

About The Author