ಬೆಂಗಳೂರು: ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇದನ್ನು ಹಲಾಲ್ ನಿಷೇಧದದ ವಿಚಾರದಿಂದ ಹಾಳು ಮಾಡುವಂತ ಕೆಲಸ ಮಾಡಬೇಡಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವರು ಹಲಾಲ್ ಮಾಂಸ ನಿಷೇಧದ ವಿವಾದ ಹುಟ್ಟು ಹಾಕುತ್ತಿದ್ದಾರೆ. ಆದ್ರೇ ರಾಜ್ಯದ ಅನೇಕ ಕಡೆಗಳಲ್ಲಿ ಹಿಂದೂ-ಮುಸ್ಲೀಂ ಸೌಹಾರ್ದತೆಯಿಂದ ಬದುಕುತಿದ್ದಾರೆ. ವರ್ಷದಡಕಿನ ಸಂದರ್ಭದಲ್ಲಿ ಯಾರೂ ಹಲಾಲ್ ಮಾಡಿದ್ದಾರಾ ಅಥವಾ ಇಲ್ಲವೋ ಎಂದು ನೋಡಿ ಮಾಂಸ ಖರೀದಿಸೋದಿಲ್ಲ ಎಂದರು.
ಯುಗಾದಿಯ ಹೊಸತಡುಕಿನ ಸಂದರ್ಭದಲ್ಲಿ ಮಾಂಸ ಖರೀದಿಯಂತ ಸಂಪ್ರದಾಯವನ್ನು ಹಳ್ಳಿಗಳಲ್ಲಿ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಹಲಾಲ್ ಮಾಂಸ ನಿಷೇಧಂತ ವಿಚಾರ ಇಟ್ಟುಕೊಂಡು, ವಿವಾದದ ಮೂಲಕ, ಅವರಿಗೆ ತೊಂದರೆ ಕೊಡಬೇಡಿ ಎಂಬುದಾಗಿ ಹೇಳಿದರು.




