ಬೆಂಗಳೂರು: ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯಲು ಮುಂದೆ ಬಂದ್ರೆ ನಾನೇ ಸಹಾಯ ಮಾಡುವೆ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂಪಿ ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಹಿಜಾಬ್ ಹಿಂದೆ ಜಮೀರ್ ಅಹಮದ್ ಖಾನ್, ಯುಟಿ ಖಾದರ್ ನಂತ ಕಿಡಿಗೇಡಿಗಳಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಎಲ್ಲಾ ಘಟನೆಗಳಿಂದ ಮರ್ಮಾಘಾತವಾಗಿದೆ ಎಂದರು.
ಅವರು ಹಲಾಲ್ ಮಾಡಿ ಉಗಿದ ಮಾಂಸವನ್ನು ನಾವು ತಿನ್ನಬೇಕಾ.? ಎಂದ ಅವರು, ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯಲು ಮುಂದೆ ಬಂದ್ರೇ ನಾನೇ ಸಹಾಯ ಮಾಡುವುದಾಗಿ ಘೋಷಿಸಿದರು.




