BREAKING : ಕೇವಲ 10 ದಿನಗಳಲ್ಲಿ 2ನೇ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ

ಬೆಂಗಳೂರು: ಕಳೆದ 10 ದಿನಗಳ ಹಿಂದೆ ಹೆಬ್ಬಾಳದಲ್ಲಿ ಬಾಲಕಿ ಅಕ್ಷಯಾ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ ಘಟನೆ ಮಾಸೋ ಮುನ್ನವೇ, ಇಂದು ಮತ್ತೊಂದು ಬಲಿಯನ್ನು ಬಿಬಿಎಂಪಿ ಕಸದ ಲಾರಿ ಪಡೆದಿದೆ. 60 ವರ್ಷದ ವೃದ್ಧರೊಬ್ಬರಿಗೆ ಕಸದ ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.

ಹೌದು.. ಬೆಂಗಳೂರಿನ ಬೇಗೂರು ಕ್ರಾಸ್ ಬಳಿಯ ರೇವಾ ವಿವಿಯ ಮುಂಭಾಗದಲ್ಲಿ ಬಿಬಿಎಂಪಿ ಕಸದ ಲಾರಿಯೊಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಂತ ರಾಮಯ್ಯ (60) ಎಂಬುವರಿಗೆ ಡಿಕ್ಕಿಯಾಗಿದೆ. ಆ ಬಳಿಕ ಅವರ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮ, ಅವರು ಸ್ಥಳದಲ್ಲಿಯೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಹೆಬ್ಬಳಾದ ಅಕ್ಷಯಾ ಸಾವಿನ, ಕೇವಲ 10 ದಿನಗಳಲ್ಲಿ 2ನೇ ಬಲಿಯನ್ನು ಬಿಬಿಎಂಪಿ ಕಸದ ಲಾರಿ ಪಡೆದಂತೆ ಆಗಿದೆ.

About The Author