ಆರ್‌ಎಸ್‌ಎಸ್ ರಿಮೋಟ್ ನಲ್ಲಿ ಸರ್ಕಾರ ನಡೆಯುತ್ತಿದೆ – ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಈ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ಯಾವುದೋ ರಿಮೋಟ್ ನಲ್ಲಿ ಸರ್ಕಾರ ನಡೆಯುತ್ತಿದೆ. ಆರ್‌ಎಸ್‌ಎಸ್ ರಿಮೋಟ್ ನಲ್ಲಿ ಸರ್ಕಾರ ನಡೆಯುತ್ತಿದೆ. ನಾನೇನು ವಚನ ಭ್ರಷ್ಟನಾಗಲಿಲ್ಲ. ಏಳು ದಿನ ಅಧಿಕಾರ‌ ಕೊಟ್ಡರೂ ಅವರು ಉಳಿಸಿಕೊಳ್ಳಲಿಲ್ಲ. ನಾನು ಬಿಜೆಪಿ ಜೊತೆ ಸರ್ಕಾರ ರಚಿಸಿದಾಗ ಕೋಮುಗಲಭೆಗೆ ಅವಕಾಶ ಕೊಟ್ಟಿದ್ದೆನಾ ? ಗಾಳಿಪಟಕ್ಕೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಕಾಂಗ್ರೆಸ್ ನಾಯಕರಿಗೆ ಧ್ವನಿಯೇ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಪಲಾಯನವಾದ ಮಾಡಿದವರೇ ಕಾಂಗ್ರೆಸ್ ನವರು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂ ಅವರು, ನಮ್ಮನ್ನ ಗುಲಾಮರನ್ನಾಗಿ ಇಡಲು ಹೊರಟವರೇ ಹಿಂದೂ ಧರ್ಮ ಅಂತಾ ಹೇಳಿಕೊಂಡು ಬಂದರು. ಅವರಿಗೆ ಬೇಕಾದಾಗ ಮಾತ್ರ ಹಿಂದೂ ಧರ್ಮ ಬೇಕು ಅಷ್ಟೇ. ಬಿಜೆಪಿಯವರಿಗೆ ಹೇಳುತ್ತೇನೆ ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ. ಪೆಟ್ರೋಲಿಯಂ, ಸಿಮೆಂಟ್, ಗ್ಯಾಸ್ ಬೆಲೆ ಎಷ್ಟಾಗಿದೆ. ಭಜರಂಗ ದಳದವರು, ವಿಶ್ವಹಿಂದೂ ಪರಿಷತ್ ನವರು ಬಂದು ಜನರ ಸಮಸ್ಯೆ ಬಗೆಹರಿಸಲಿ. ನಾನು ನಿಮ್ಮ ಜೊತೆ ಕೈಜೋಡಿಸುತ್ತೇನೆ ಎಂದರು.

ಕಾಂಗ್ರೆಸ್ ಸರಿಯಾಗಿದಿದ್ರೆ ಇಂದು ಯಾಕೆ ಈ ಪರಿಸ್ಥಿತಿ ಬರುತ್ತಿತ್ತು. ಗ್ಯಾಸ್ ಸಿಲಿಂಡರ್ ಗೆ ಅಲಂಕಾರ ಮಾಡಿಕೊಂಡು ಹೊರಟಿದ್ದಾರೆ. ಇತಿಹಾಸ ಹೊಂದಿರುವ ಪಕ್ಷ ಅಂತಾ ಹೇಳುತ್ತಿದ್ದಾರೆ. ಇಂದಿನ ಸ್ಥಿತಿಗೆ ಕಾರಣ ಯಾರು ? ಎಂದು ಪ್ರಶ್ನಿಸಿದರು.

About The Author